ಚುನಾವಣಾ ಕಾಲ ಹತ್ತಿರ ಬಂತು ಅಂದರೆ ನಮ್ಮ ರಾಜಕಾರಣಿಗಳು ಮುಳುಗುವ ಹಡಗಿನಿಂದ ತೇಲುವ ಹಡಗಿನ ಕಡೆಗೆ ಹಾರುವುದು ಸರ್ವೇ ಸಾಮಾನ್ಯ. ಅದೇ ರೀತಿಯಲ್ಲಿ ಈ ಬಾರಿ ಕೂಡಾ ಸ್ವಲ್ಪ ಬೇಗನೆ ವಲಸೆ ಹೇುಾಗುವ ಪರಿಸ್ಥಿತಿ ಕಾಣುವಂತಿದೆ. ಈ ಬಾರಿ ಬಿಜೆಪಿಯ ಕಡೆಗೆ ಹೆಚ್ಚು ಅನ್ಯ ಪಕ್ಷೀಯರು ವಲಸೆ ಬರುವ ಲಕ್ಷಣಗಳು ಎದ್ದುಕಾಣುತ್ತಿದೆ.
ಹಾಗಾದರೆ ಈ ಪಕ್ಷಾಂತರದಿಂದ ಬಿಜೆಪಿಗೆ ಲಾಭವೊ? ನಷ್ಟವೊ? ಅನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ನನ್ನ ಅಭಿಪ್ರಾಯದಲ್ಲಿ ಪಕ್ಷಾಂತರಿಗಳನ್ನು ತೆಗೆದು ಕೊಂಡು ಪಕ್ಷ ಕಟ್ಟುವುದು ಬಿಜೆಪಿಯ ಬೆಳವಣಿಗೆಯ ದೃಷ್ಟಿಯಿಂದ ಹೆಚ್ಚು ಅಪಾಯಕಾರಿಯೂ ಹೌದು.
ಈ ಪಕ್ಷಾಂತರಿಗಳು ಹೇಗೆ ಅಂದರೆ ವಿಶ್ವಾಮಿತ್ರನ ತಪಸ್ಸು ಹಾಳು ಮಾಡಲು ಬಂದ ರಂಭೆ ಊರ್ವಶಿ ಮೇನಕಿಯರ ತರಹ! ಇವರು ನಿಮಗೆ ತಾತ್ಕಾಲಿಕ ಸುಖ ಸಂತೇೂಷ ನೀಡಬಹುದು ಆದರೆ ಇದು ಕ್ಷಣಿಕ ಸುಖಅನ್ನುವದನ್ನು ಖಂಡಿತವಾಗಿಯೂ ಮರೆಯ ಬೇಡಿ. ನಿಮ್ಮ ಹೆಸರು ತಪಸ್ಸು ಹಾಳು ಮಾಡಿ ಹೇಳ ಹೆಸರಿಲ್ಲದೆ ಹಾಗೇ ಮಾಡುವುದಂತೂ ಶತ ಸಿದ್ಧ.
ಇದಾಗಲೇ ಬಿಜೆಪಿಗೆ ಇದರ ಕಹಿ ಅನುಭವವಾಗಿರುವುದಂತೂ ನಿಜ.ಕಳೆದ ಬಾರಿ ಸರ್ಕಾರ ಉಳಿಸಿಕೊಳ್ಳುವ ನೆಪದಲ್ಲಿ ಒಂದುವರೆ ಡಜನ್ ಸದಸ್ಯರನ್ನು ಅನ್ಯ ಪಕ್ಷದಿಂದ ತಂದು ಮಣೆ ಹಾಕಿ ಪಡಬಾರದ ಕಷ್ಟ; ಕೇಳ ಬಾರದ ಮಾತುಗಳು ಇನ್ನು ನೆನಪಿನಲ್ಲಿರ ಬೇಕು.
ಅನ್ಯ ಪಕ್ಷದಿಂದ ಬಂದವರು ಸುಮ್ಮನೆ ಕಾರ್ಯಕರ್ತರಾಗಿ ಬರುವುದಿಲ್ಲ. ಬದಲಾಗಿ ಅವರು ಬಯಸುವುದು ಮೊದಲಿನ ತತ್ಸಮಾನ ಹುದ್ದೆಗೆ ಕಡಿಮೆ ಇಲ್ಲದೆ ತಮ್ಮ ಸ್ಥಾನಮಾನಕ್ಕೆ ಸ್ವಲ್ಪವೂ ಚ್ಯುತಿ ಬಾರದ ಹಾಗೆ ನಡೆದು ಕೊಳ್ಳುವುದಂತೂ ಗ್ಯಾರಂಟಿ. ಹಾಗಾದರೆ ಇಷ್ಟೊಂದು ಕಷ್ಟದಲ್ಲಿ ಯಾಕೆ ಇವರಿಗೆ ಮಣೆ ಹಾಕಬೇಕು. ಇದರಿಂದಾಗಿ ಪಕ್ಷಕ್ಕೆ ನಯಾಪೈಸಾ ಲಾಭವಂತೂ ಇಲ್ಲ. ಬದಲಾಗಿ ನಷ್ಟವೇ ಜಾಸ್ತಿ. ಇದರಿಂದಾಗಿ ಇದೇ ಪಕ್ಷ ದಲ್ಲಿ ಅವಕಾಶಕ್ಕಾಗಿ ಕಾದು ಕೂತವರಿಗೆ ಮನ ನೇೂವಾಗುವುದಂತೂ ಸತ್ಯ. ಪಕ್ಷಾಂತರಿಗಳಿಂದಾಗಿ ಪಕ್ಷ ಸಿದ್ಧಾಂತ ನಾಯಕತ್ವದ ಗೌರವ ಕಳಚಿ ನಿಲ್ಲ ಬೇಕಾದ ಪರಿಸ್ಥಿತಿ.
ಮತದಾರರನಂತೂ ಇಂತಹ ಪಕ್ಷಾಂತರಿಗಳ ಕಚ್ಚಾಡುವ ಪಕ್ಷವನ್ನು ಹೆಚ್ಚು ಕಾಲ ಬಯಸುವುದೇ ಇಲ್ಲ. ಇತ್ತೀಚಿಗೆ ಕಾಂಗ್ರೆಸ್‌ಗೆ ಪಂಜಾಬಿನಲ್ಲಿ ಆದ ಅನುಭವವೂ ಇದೆ. ಬಿಜೆಪಿಯ ಬೆಳವಣಿಗೆಯ ದೂರದಶಿ೯ತ್ವದ ದೃಷ್ಟಿಯಿಂದ ಈ ಚುನಾವಣಾ ಕಾಲದ ಪಕ್ಷಾಂತರ ಪರ್ವ ಹೆಚ್ಚು ಆರೇೂಗ್ಯ ಪೂರ್ಣ ಲಕ್ಷಣವಂತೂ ಖಂಡಿತವಾಗಿಯೂ ಅಲ್ಲ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق