ಮಂಗಳೂರು: ಗೃಹರಕ್ಷಕ ದಳ ವಿಟ್ಲ ಘಟಕಕ್ಕೆ ಇನ್ಫೋಸಿಸ್ ವತಿಯಿಂದ ನೀಡಲಾದ ಕಂಪ್ಯೂಟರ್ನ್ನು ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ವಿಟ್ಲದ ಪ್ರಭಾರ ಘಟಕಾಧಿಕಾರಿಯಾದ ಸಂಜೀವ ಇವರಿಗೆ ಹಸ್ತಾಂತರಿಸಿದರು.
ಇನ್ನು ಮುಂದಿನ ದಿನಗಳಲ್ಲಿ ಎಲ್ಲಾ ಘಟಕಗಳ ವಾರದ ಕವಾಯತಿನ ಹಾಜರಾತಿಗಳನ್ನು ಕಂಪ್ಯೂಟರ್ ಮೂಲಕವೇ ಕಳುಹಿಸುವಂತೆ ಸೂಚಿಸಿದರು ಮತ್ತು ಕಾಗದ ರಹಿತ ಕಛೇರಿ ಆಗಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಉಪ ಸಮಾದೇಷ್ಟರಾದ ರಮೇಶ್, ಕಛೇರಿಯ ಅಧೀಕ್ಷಕರಾದ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್ ಹಾಗೂ ಕಡಬ ಘಟಕದ ಘಟಕಾಧಿಕಾರಿ ತೀರ್ಥೇಶ್, ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್, ಮುಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق