ಬೆಂಗಳೂರು; ಕಾಲೇಜಿನಿಂದ ಡಿಬಾರ್ ಮಾಡಿದ ಕಾರಣಕ್ಕಾಗಿ 5ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭವ್ಯ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಜ್ಯೋತಿನಿವಾಸ್ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಭವ್ಯಾಳನ್ನು ಪರೀಕ್ಷೆ ನಕಲಿ ಮಾಡುತ್ತಿದ್ದ ಕಾರಣಕ್ಕೆ ಡಿಬಾರ್ ಮಾಡಲಾಗಿತ್ತು.
ಇದರಿಂದ ಮನನೊಂದು ತನ್ನ ಸಹೋದರಿ ದಿವ್ಯಾಗೆ ಕರೆ ಮಾಡಿ, ನನ್ನನ್ನು ಕಾಲೇಜಿನಿಂದ ಡಿಬಾರ್ ಮಾಡಿದ್ದಾರೆ.
ಹೀಗಾಗಿ, ತಾನು ಬದುಕುವುದಿಲ್ಲ ಎಂದು ಲೇಡಿಸ್ ಪಿಜಿ ಕಟ್ಟಡದ 5ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ವಿಚಾರವನ್ನು ಭವ್ಯಾಳ ಸಹೋದರಿ ದಿವ್ಯಾ ತಂದೆಗೆ ತಿಳಿಸಿದ್ದಾಳೆ. ಆದರೆ, ಆಕೆಯ ತಂದೆ ಮುಳಬಾಗಿಲಿನಿಂದ ಪಿಜಿ ಬಳಿ ಬರುತ್ತಿದ್ದಂತೆ ಪೊಲೀಸರು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕರೆ ಮಾಡಿದ್ದಾರೆ.
ಈ ಬಗ್ಗೆ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق