ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಾಲಾ ಬಸ್ ಅಪಘಾತ; ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯ

ಶಾಲಾ ಬಸ್ ಅಪಘಾತ; ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯ

 


ಶ್ರವಣಬೆಳಗೊಳ (ಹಾಸನ): ಚಾಲಕನ ನಿರ್ಲಕ್ಷ್ಯದಿಂದ ಖಾಸಗಿ ಶಾಲಾ ಬಸ್​ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದ ಘಟನೆಯೊಂದು ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಅರುವನಹಳ್ಳಿ ಗೇಟ್ ಬಳಿ ನಡೆದಿದೆ.

ಇದರಿಂದಾಗಿ ಕೆಲ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶ್ರವಣಬೆಳಗೊಳದಲ್ಲಿ ಶಾಲಾ ವಾಹನ ಪಲ್ಟಿ ಮಂಜುನಾಥ ಎಜುಕೇಷನ್ ಟ್ರಸ್ಟ್​​ನ ಬಿಎಂಎಚ್​​ ಪಬ್ಲಿಕ್​ ಶಾಲಾ ವಾಹನ ಪಲ್ಟಿಯಾಗಿದ್ದು, ಶ್ರವಣಬೆಳಗೊಳ ಹೋಬಳಿಯ ಪರಮ ಗ್ರಾಮಕ್ಕೆ ಶಾಲೆಯಿಂದ ವಿದ್ಯಾರ್ಥಿಗಳನ್ನು ಬಿಡಲು ಹೋಗುತ್ತಿದ್ದ ವೇಳೆ ಕೆರೆಯ ಸಮೀಪ ಬಸ್ ಪಲ್ಟಿಯಾಗಿತ್ತು.

ಘಟನೆಯಲ್ಲಿ 6 ರಿಂದ 7 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಘಟನಾ ಸ್ಥಳಕ್ಕೆ ಶ್ರವಣಬೆಳಗೊಳದ ಪಿಎಸ್‌ಐ ಸ್ವಾಮಿ ಸೇರಿದಂತೆ ಪೊಲೀಸ್ ಠಾಣೆ ಸಿಬ್ಬಂದಿ ಆಗಮಿಸಿ, ಸ್ಥಳ ಪರಿಶೀಲನೆ ಮಾಡಿದ್ದಾರೆ. 


hit counter

0 تعليقات

إرسال تعليق

Post a Comment (0)

أحدث أقدم