ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರು ಮರಕ್ಕೆ ಡಿಕ್ಕಿ; ಚಾಲಕ ಸಾವು, ಮೂವರಿಗೆ ಗಾಯ

ಕಾರು ಮರಕ್ಕೆ ಡಿಕ್ಕಿ; ಚಾಲಕ ಸಾವು, ಮೂವರಿಗೆ ಗಾಯ

 


ಹುಕ್ಕೇರಿ: ಹೊರವಲಯದ ಕ್ಯಾರಗುಡ್ಡ ಬಳಿ ಶುಕ್ರವಾರ ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ ಚಾಲಕ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

ಮೃತರನ್ನು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಮುರಗೋಡ ಗ್ರಾಮದ ಸಂಜಯ ಜಯಸಿಂಗರಾವ್ ಚೌಗಲೆ (56) ಎಂದು ಗುರುತಿಸಲಾಗಿದೆ

ನೀಲಾಂಬರಿ ಸಂಜಯ ಚೌಗಲೆ (48), ವಿಜಯಾ ಸದಾಶಿವ ಸೂರ್ಯವಂಶಿ ಪಾಟೀಲ (70) ಮತ್ತು ಅನಿಲ ಜ್ಞಾನದೇವ್ ಗುಜರ್ (40) ಅವರನ್ನು ಕೊಲ್ಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರೆಲ್ಲರೂ ಮುರಗೋಡದಿಂದ ಸವದತ್ತಿ ಕಡೆಗೆ ಹೊರಟಿದ್ದರು. ಅಡ್ಡ ಬಂದ ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ, ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಇನ್‌ಸ್ಪೆಕ್ಟರ್‌ ಎಂ.ಎಂ. ತಹಶೀಲ್ದಾರ್ ಮತ್ತು ಪಿಎಸ್‌ಐ ಸಿದ್ರಾಮಪ್ಪ ಉನ್ನದ ಭೇಟಿ ನೀಡಿ ಪರಿಶೀಲಿಸಿದರು. ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


hit counter

0 تعليقات

إرسال تعليق

Post a Comment (0)

أحدث أقدم