ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 "ಮನ ಕಲಕುವ ಮನವಿ"ಗೆ ಪೇಜಾವರ ಶ್ರೀಗಳ ಸ್ವಷ್ಟ ಪ್ರತ್ಯುತ್ತರ

"ಮನ ಕಲಕುವ ಮನವಿ"ಗೆ ಪೇಜಾವರ ಶ್ರೀಗಳ ಸ್ವಷ್ಟ ಪ್ರತ್ಯುತ್ತರ


ಉಡುಪಿಯಿಂದಲೇ ಪ್ರಾರಂಭವಾಗಿ ಉಡುಪಿಯಿಂದಲೇ ಕೊನೆ ಆಗಬೇಕು ಅನ್ನುವ ತರದಲ್ಲಿ ಉಡುಪಿಯಲ್ಲಿಂದು ಒಂದು ಸಂದರ್ಭ ಮೂಡಿ ಬಂತು. ಸ್ಥಳೀಯ ಮುಸ್ಲಿಂ ವ್ಯಾಪಾರಸ್ಥರು ಪರಮ ಪೂಜ್ಯ ಪೇಜಾವರ ಮಠಾಧೀಶರನ್ನು ಕಂಡು ಮನವಿ ಸಲ್ಲಿಸಿದ ಸಂದರ್ಭ. ಜಾತಿ ಧಮ೯.. ಹಿಜಾಬು ಹಲಾಲುಗಳನ್ನು ಮೀರಿ ನಿಂತು ನೇೂಡಿದಾಗ ಇದೊಂದು ಮನ ಕಲುಕುವ ಸಂದರ್ಭ ಜೊತೆಗೆ ಸ್ವಾಮೀಜಿಯವರು ನೀಡಿದ ಉತ್ತರ ಕೂಡಾ ಅಷ್ಟೇ ಮಾರ್ಮಿಕವಾಗಿತ್ತು.


ಪಾಪ ಯಾರೇೂ ಮಾಡಿದ ತಪ್ಪಿಗೆ ಯಾರೊ ತಮ್ಮ ಬದುಕಿನಲ್ಲಿ ಕಷ್ಟ ಅನುಭವಿಸಬೇಕಾಯಿತು ಅನ್ನುವುದು ಮನವಿಯ ಅಂತರ್ಗತ ಅರ್ಥ. ಆದರೆ ಇದಕ್ಕೆ ತಕ್ಷಣವೇ ಸ್ಪಂದಿಸಿದ ಪೇಜಾವರ ಶ್ರೀಗಳು ಕೂಡಾ ಸಮಸ್ಯೆಯ ಅಂತರಾಳವನ್ನು ತಕ್ಷಣವೇ ಅಥ೯ ಮಾಡಿಕೊಂಡು ನೀಡಿದ ಉತ್ತರ ಕೂಡಾ ಸಮಸ್ಯೆಯ ಮೂಲವನ್ನೆ ಸ್ಪರ್ಶಿಸುವಂತಿತ್ತು. ನಾವು ನೀವು ಕೂತು ತಕ್ಷಣವೇ ಪರಿಹಾರ ಕಂಡುಕೊಳ್ಳುವ ಪರಿಸ್ಥಿತಿಯಲ್ಲಿ ನಾವೀಗ ಇಲ್ಲ. ಸಮಯ ತುಂಬಾ ಮೀರಿ ಹೇೂಗಿದೆ. ನಿಮ್ಮ ನೇೂವು ನಮಗೆ ಅರ್ಥವಾಗುತ್ತದೆ ಆದರೆ ಹಿಂದುಗಳಾದ ನಮ್ಮ ನೇೂವುವನ್ನು ನೀವು ಅರ್ಥ ಮಾಡಿಕೊಳ್ಳಬೇಕು.


ಓರ್ವ ಬಡ ಹಿಂದು ಮಹಿಳೆ ಮನೆಯಲ್ಲೊಂದು ದನ ಸಾಕಿ ಅದನ್ನೇ ನಂಬಿ ಬದುಕುತ್ತಿರುವ ಸಂದರ್ಭದಲ್ಲಿ ಅದನ್ನೇ ಲೂಟಿ ಮಾಡಿ ಇದು ನಮ್ಮ ಆಹಾರದ ಹಕ್ಕು ಎಂದು ಪ್ರತಿಪಾದಿಸುವ ನಿಮ್ಮ ಮನ ಸ್ಥಿತಿಯಲ್ಲಿ ಚೂರು ಬದಲಾಗದೆ ಈಗಿನ ನಿಮ್ಮ ಬದುಕಿನ ವ್ಯಥೆಯನ್ನು ನಾನುಹೇಗೆ ಅಥ೯ ಮಾಡಿಕೊಳ್ಳಲಿ.. ಅಂದರೆ ಇಂದಿನ ಸಮಸ್ಯೆಗೆ ಪರಿಹಾವೆಂದರೆ ತಳ ಮಟ್ಟದಲ್ಲಿಯೇ ಇದಕ್ಕೆ ನಾವು ಪರಸ್ಪರ ಕೂತು ಪರಿಹಾರ ಕೂತು ಚರ್ಚಿಸ ಬೇಕಾಗಿದೆ. ಹಾಗಾಗಿ ಇದಕ್ಕಾಗಿ ನೀವು ಮೊದಲು ನಿಮ್ಮ ಮನ ತಿದ್ದಿಕೊಂಡು ಬನ್ನಿ.. ಅನ್ನುವ ಹೃದಯ ಮುಟ್ಟಿ ನೇೂಡ ಬೇಕಾದ ಖಡಕ್ ಸಂದೇಶ ರವಾನಿಸಿರುವುದು ಎಲ್ಲರ ಹೃದಯ ಮುಟ್ಟುವಂತಿತ್ತು.


ಒಂದಂತೂ ಸತ್ಯ ಹಾದಿ ಬೀದಿಯಲ್ಲಿ ತಿರುಗುವವರು ಮನಸ್ಸಿಗೆ ಬಂದಂತೆ ಹೇಳಿಕೆ ಪ್ರತಿಭಟನೆ ನೀಡುವುದನ್ನು  ಎಲ್ಲಿಯವರೆಗೆ ನಿಲ್ಲಿಸುವುದಿಲ್ಲವೊ ಅಲ್ಲಿಯ ತನಕ ಈ ಸಮಸ್ಯೆಗೆ ಪೂಣ೯ ವಿರಾಮವಿಡಲು ಸಾಧ್ಯವಿಲ್ಲ ಅನ್ನುವುದು ಸ್ವಾಮೀಜಿ ಅವರ ಸ್ವಷ್ಟ ಸಂದೇಶ.ಈ ದೇಶದ ಕಾನೂನು ಸಂವಿಧಾನ ನ್ಯಾಯಾಂಗವನ್ನು ಎಲ್ಲಿಯ ತನಕ ನಾವು ಗೌರವಿಸುವುದಿಲ್ಲವೊ ಅಲ್ಲಿಯ ತನಕ ನಮಗೆ ಮನವಿ ಸಲ್ಲಿಸುವ ನೈತಿಕತೆಯೂ ಬರುವುದಿಲ್ಲ. ಪರಸ್ಪರ ಸುಖ ಕಷ್ಟಗಳನ್ನು ಅರಿತು ಒಂದಾಗುವ ಮನಸ್ಸಗಳು ಒಂದಾಗಿ ಜೊತೆಗೆ ನಮ್ಮ ರಾಜಕಾರಣಿಗಳು ಸ್ವಲ್ಪ ಸಮಯ ಬಾಯಿ ಮುಚ್ಚಿ ಕುಳಿತಾಗ ಮಾತ್ರ ಇಂದಿನ ಸಮಸ್ಯೆಗೊಂದು ಸ್ವಷ್ಟ ಪರಿಹಾರ ಸಿಗಬಹುದು ಅನ್ನುವುದು ನನ್ನ ಖಚಿತ ನಿಲುವು.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم