ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುನೀತ್ ಹುಟ್ಟು ಹಬ್ಬದ ಹಿನ್ನೆಲೆ; ಕಂಠೀರವ ಸ್ಟುಡಿಯೊ ಗೆ ಅಭಿಮಾನಿಗಳ ಆಗಮನ

ಪುನೀತ್ ಹುಟ್ಟು ಹಬ್ಬದ ಹಿನ್ನೆಲೆ; ಕಂಠೀರವ ಸ್ಟುಡಿಯೊ ಗೆ ಅಭಿಮಾನಿಗಳ ಆಗಮನ

 


ಬೆಂಗಳೂರು: ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ ಅಭಿಮಾ ನಿಗಳ ದಂಡೇ ಆಗಮಿಸುತ್ತಿದೆ. ಜನ್ಮದಿನದಂದು ಪುನೀತ್​ ಸಮಾಧಿಗೆ ವಿಶೇಷ ನಮನ ಸಲ್ಲಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ.

ಅವರ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದ್ದು, ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷ ಪುನೀತ್ ಅವರು ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಿಸಿಕೊಂಡಿರಲಿಲ್ಲ. 

ಈ ಬಾರಿ ಕೋವಿಡ್​ ಕಡಿಮೆ ಇದ್ದು, ಅವರು ಬದುಕಿದ್ದರೆ ಈ ವಿಶೇಷ ದಿನವನ್ನು ಫ್ಯಾನ್ಸ್ ಜೊತೆ ಸೆಲೆಬ್ರೇಟ್​ ಮಾಡುತ್ತಿದ್ದರು. ಆದರೆ, ಇನ್ನೂ ಮುಂದೆ ಅದು ಸಾಧ್ಯವೇ ಇಲ್ಲ ಎನ್ನುವುದನ್ನು ನೆನೆದು ಅಭಿಮಾನಿಗಳು ದುಃಖಪಡುತ್ತಿದ್ದಾರೆ.


hit counter

0 Comments

Post a Comment

Post a Comment (0)

Previous Post Next Post