ಬೆಂಗಳೂರು: ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ ಅಭಿಮಾ ನಿಗಳ ದಂಡೇ ಆಗಮಿಸುತ್ತಿದೆ. ಜನ್ಮದಿನದಂದು ಪುನೀತ್ ಸಮಾಧಿಗೆ ವಿಶೇಷ ನಮನ ಸಲ್ಲಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ.
ಅವರ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದ್ದು, ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷ ಪುನೀತ್ ಅವರು ಅಭಿಮಾನಿಗಳ ಜೊತೆ ಬರ್ತ್ಡೇ ಆಚರಿಸಿಕೊಂಡಿರಲಿಲ್ಲ.
ಈ ಬಾರಿ ಕೋವಿಡ್ ಕಡಿಮೆ ಇದ್ದು, ಅವರು ಬದುಕಿದ್ದರೆ ಈ ವಿಶೇಷ ದಿನವನ್ನು ಫ್ಯಾನ್ಸ್ ಜೊತೆ ಸೆಲೆಬ್ರೇಟ್ ಮಾಡುತ್ತಿದ್ದರು. ಆದರೆ, ಇನ್ನೂ ಮುಂದೆ ಅದು ಸಾಧ್ಯವೇ ಇಲ್ಲ ಎನ್ನುವುದನ್ನು ನೆನೆದು ಅಭಿಮಾನಿಗಳು ದುಃಖಪಡುತ್ತಿದ್ದಾರೆ.
إرسال تعليق