ಮಂಡ್ಯ: ಲಾರಿ ಚಕ್ರ ಬ್ಲ್ಯಾಸ್ಟ್ ಆಗಿ ಲಾರಿ ಚಾಲಕ ಸಜೀವ ದಹನವಾಗಿರುವ ಘಟನೆಯೊಂದು ಮದ್ದೂರು ಪಟ್ಟಣದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.
ಮದ್ದೂರು ಪಟ್ಟಣದ ಬೆಂಗಳೂರು - ಮೈಸೂರು ಎಲ್.ಐ.ಸಿ ಕಛೇರಿ ಮುಂಭಾಗ ಘಟನೆ ನಡೆದಿದ್ದು, ಬಿಡದಿಯಿಂದ ಮೈಸೂರಿಗೆ ಜೆಲ್ಲಿ ತುಂಬಿಕೊಂಡು ತೆರಳುತ್ತಿದ್ದ ಲಾರಿ, ಎಲ್.ಐ.ಸಿ ಕಛೇರಿ ಬಳಿ ಬರುತ್ತಿದ್ದಂತೆ ಪಂಚರ್ ಆಗಿ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ.
ಮೃತ ಲಾರಿ ಚಾಲಕನನ್ನು ಹಾಸನ ಮೂಲದ ದಿನೇಶ್ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಚಾಲಕನ ಶವ ಹೊರತೆಗೆಯಲಾಗಿದೆ. ಚಾಲಕನ ಶವ ಮದ್ದೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
Post a Comment