ಕಲಬುರಗಿ: ತಾಲೂಕಿನ ಗರೂರ (ಬಿ) ಗ್ರಾಮದ ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆ (ರಿ)ಯ ಅಡಿಯಲ್ಲಿ ನಡಿಯುತ್ತಿರುವ ಮೈನಾ ಕಂಪ್ಯೂಟರ್ ತರಬೇತಿ ಕೇಂದ್ರ ಗೊಬ್ಬರ (ಬಿ) ತಾ, ಅಫಜಲಪುರ ಜಿಲ್ಲಾ ಕಲಬುರಗಿಯಲ್ಲಿ ಇಂದು (ಮಾ.16) ಪಕ್ಷಿಗಳ ಸಂರಕ್ಷಣೆಯ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಮೈನಾ ಕಂಪ್ಯೂಟರ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಪಕ್ಷಿಗಳ ಸಂರಕ್ಷಣೆ ಮತ್ತು ಗೋಮಯ ಬಳಸಿಕೊಂಡು ಬಟ್ಟಲು ನಿರ್ಮಾಣ ಯಾವರೀತಿ ಮಾಡಬೇಕು ಎಂಬುದು ಹಾಗೂ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ನೀರು ಸಂಗ್ರಹಣೆ ಕುರಿತು ಮಾಹಿತಿ ನೀಡಲಾಯಿತು.
ಮೈನಾ ಕಂಪ್ಯೂಟರ್ ತರಬೇತಿ ಕೇಂದ್ರದ ಸಂಯೋಜಕರಾದ ಸಂಗಮ್ಮ ಅವರು ಕಾರ್ಯಕ್ರಮ ಉದ್ಘಾಟಿಸಿ ಪಕ್ಷಿಗಳ ಸಂರಕ್ಷಣೆ ಕುರಿತು ಮಾತನಾಡಿ ಪಕ್ಷಿಗಳ ಸಂಖ್ಯೆ ಕ್ರಮೇಣ ಇಳಿಮುಖ ವಾಗುತ್ತಿರುವುದು ತಮಗೆಲ್ಲರಿಗೂ ಗೊತ್ತಿರುವ ವಿಷಯ ಅವುಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಹೆಳಿದರು, ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆ ಅದ್ಯಕ್ಷ ಶಿವರಾಜಕುಮಾರ ಎನ್. ಹಳ್ಳಿ ಮಾತನಾಡಿ ಬೇಸಿಗೆ ಬಂತೆಂದರೆ ಸಾಕು ಪಕ್ಷಿಗಳು ಹಲವು ತೊಂದರೆಗಳು ಅನುಭವಿಸುತ್ತವೆ ಮನುಷ್ಯ ನಾದರೆ ಬೇಸಿಗೆ ಕಾಲದಲ್ಲಿ ತಂಪು ಪಾನೀಯಗಳ ಮೊರೆ ಹೋಗಿ ದಾಹ ನೀಗಿಸಿಕೊಳ್ಳುತ್ತಾರೆ. ಆದರೆ ಪ್ರಾಣಿ- ಪಕ್ಷಿಗಳು ಕುಡಿಯಲು ನೀರು ಸಿಗದೆ ಕ್ರಮೇಣ ಪಕ್ಷಿಗಳ ಸಂಖ್ಯೆ ಇಳಿಮುಖವಾಗುತ್ತಲಿದೆ. ಆದ ಕಾರಣ ಪಕ್ಷಿಗಳ ಸಂತತಿ ಬೆಳಸುವುದ ಪ್ರತಿಯೊಬ್ಬ ಮಾನವನ ಕರ್ತವ್ಯವಾಗಿದೆ ಎಂದರು. ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ದನ ಕರುಗಳು ಇರುವುದು ಸರ್ವೇ ಸಾಮಾನ್ಯ. ಆದ ಕಾರಣ ಸೆಗಣಿ ಸಿಗುವುದು ಸುಲಭ. ಅದನ್ನು ಬಳಸಿಕೊಂಡು ಬಟ್ಟಲು ನಿರ್ಮಾಣ ಮತ್ತು ಹಳೆಯ ಗಡಿಗೆ, ಡಬ್ಬಿ, ಬಾಟಲ್ ತೆಂಗಿನ ಚಿಪ್ಪುಗಳನ್ನು ಬಳಸಿಕೊಂಡು ನೀರು ಸಂಗ್ರಹಿಸುವುದನ್ನು ಯಾವ ರೀತಿ ಮಾಡುವುದನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಯಿತು.
ಕಾರ್ಯಕ್ರಮ ದಲ್ಲಿ ಮೈನಾ ಕಂಪ್ಯೂಟರ್ ತರಬೇತಿ ಕೇಂದ್ರದ ಸಂಯೋಜಕರಾದ ಸಂಗಮ್ಮ ಹಾಗೂ ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜಕುಮಾರ ಹಳ್ಳಿ ಸದಸ್ಯ ನಾಗಣ್ಣ, ದಯಾನಂದ ಗುರುಬಾಯಿ ಅವರು ಉಪಸ್ಥಿತರಿದ್ದರು.
ಗೋಮಯದಿಂದ ಬುಟ್ಟಿಗಳನ್ನು ಮಾಡುವ ವಿಧಾನ:
ಒಂದು ದಿನದ ಹಿಂದಿನ ಗೋವುಗಳ ಸಗಣಿಯನ್ನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ಹದಗೊಳಿಸಿ ಬುಟ್ಟಿಯ ಆಕಾರದಂತೆ ವಿನ್ಯಾಸಗೊಳಿಸಬೇಕು. ನಂತರ ಅದನ್ನು ಎರಡು ಮೂರು ದಿನಗಳ ಕಾಲ ನೆರಳಿನಲ್ಲಿ ಒಣಗಿಸಿ ಅದು ಒಣಗಿದ ನಂತರ ಅದು ಗಟ್ಟಿಯಾಗುತ್ತದೆ. ನಂತರ ಅದರ ಒಳಗೆ ನೀರು ಹಾದು ಹೋಗದ ಹಾಗೆ ಅಲುಮಿನಿಯಂ ಫೊಯಿಲ್ ಅಥವಾ ಪ್ಲಾಸ್ಟಿಕ್ ಚೀಲ ಬಳಸಿಕೊಂಡು ಬುಟ್ಟಿಯ ಒಳಗೆ ಲೇಪಿಸಿ ಲೇಪಿಸಿದ ನಂತರ ಸುತಳಿಯಿಂದ ಅದನ್ನು ಜಂತಗಿ ರೀತಿಯಲ್ಲಿ ಮಾಡಿ ನೆರಳು ಇರುವ ಕಡೆ ಗಿಡ ಮರ ಅಥವಾ ಮನೆಯ ಮುಂಬಾಗದಲ್ಲಿ ನೇತು ಹಾಕಿದರೆ ಸುಲಭವಾಗಿ ಪಕ್ಷಿಗಳ ನೀರಿನ ದಾಹ ನೀಗಿಸಬಹುದು ಜೊತೆಗೆ ಕಾಳು ಸಹ ಹಾಕಬಹುದು.
ತೆಂಗಿನ ಚಿಪ್ಪು:
ಎಳನೀರು ಕುಡಿದು ಬಿಸಾಡಿರುವುದನ್ನು ನೋಡಿದ್ದೆವೆ ಅವುಗಳಲ್ಲಿ ತೆಂಗಿನ ಚಿಪ್ಪು ಗಟ್ಟಿ ಇರುವುದನ್ನು ತಂದು ಅದನ್ನು ಅರ್ಧ ಭಾಗ ಕತ್ತರಿಸಿ ಅದಕ್ಕೆ ಜಂತಗಿ ರೀತಿಯಲ್ಲಿ ಕಟ್ಟಿ ನೀರು ಹಾಕಿ ಗಿಡಗಳಿಗೆ ನೇತುಹಾಕುವುದರ ಮೂಲಕ ಪಕ್ಷಿಗಳ ದಾಹ ನಿಗಿಸಬಹುದಾಗಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment