ಬಹು ವರುಷಗಳ ಹಿಂದೆ ಖ್ಯಾತ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರು ಹೇಳಿದ ಮಾತು ನೆನಪಾಗುತ್ತಿದೆ. "ನಾವು ಯಾವುದೇ ಸಭೆ ಸಮಾರಂಭಗಳಿಗೆ ಹೇೂದಾಗ ಅಲ್ಲಿ ಹಾಕಿರುವ ಆಸನಗಳಲ್ಲಿ ಕುಳಿತು ಕೊಳ್ಳುವಾಗ ಸ್ವಲ್ಪ ಆಲೇೂಚನೆ ಮಾಡಿ ಕುಳಿತುಕೊಳ್ಳಬೇಕು. ಇಲ್ಲವಾದರೆ ನಮಗೆ ಬೇಸರವೋ, ಮುಜುಗರವೋ ಆಗುವ ಸಂದರ್ಭವೂ ಇದೆ. ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ನಮ್ಮ ಯೇೂಗ್ಯತೆ ಆರ್ಹತೆಗಿಂತ ಎರಡು ಸಾಲುಗಳ ಹಿಂದೆಯೇ ಕುಳಿತು ಕೊಳ್ಳಬೇಕು. ಅದೇ ನೀವು ಮುಂದಿನ ಸಾಲಿನಲ್ಲಿ ಹೇೂಗಿ ಕುಳಿತು ಕೊಂಡಿದ್ದೀರಿ ಅಂತ ಇಟ್ಟುಕೊಳ್ಳಿ. ಆಗ ಕಾರ್ಯಕ್ರಮ ಆಯೇೂಜಕರು ಬಂದು ಸರ್ ಸ್ವಲ್ಪ ಹಿಂದೆ ಕುಳಿತುಕೊಳ್ಳಿ, ದೊಡ್ಡ ವ್ಯಕ್ತಿಗಳು ಬರುವವರಿದ್ದಾರೆ ಅಂದರೆ ನಿಮಗೆಷ್ಟು ಬೇಸರ ಮುಜುಗುರವಾಗುವುದಿಲ್ಲ? ಅದೇ ನಿಮಗೆ ಮುಂದೆ ಕುಳಿತುಕೊಳ್ಳುವ ಯೇೂಗ್ಯತೆ ಆರ್ಹತೆ ಇದೆ. ಆದರೂ ಕೂಡಾ ನೀವು ಎರಡು ಸಾಲು ಹಿಂದೆ ಕುಳಿತಿದ್ದೀರಿ ಅಂತ ಇಟ್ಟುಕೊಳ್ಳಿ. ಇದನ್ನು ಕಂಡ ಕಾರ್ಯಕ್ರಮ ಆಯೇೂಜಕರು ಬಂದು ಸರ್, ನೀವು ಮುಂದೆ ಬನ್ನಿ ಅಂದಾಗ ನಿಮಗೆ ಎಷ್ಟು ಖುಶಿಯಾಗುವುದಿಲ್ಲ ಹೇಳಿ...?
ಈ ಪ್ರಸಂಗ ಈಗ ಯಾಕೆ ನೆನಪಾಯಿತು ಅಂದರೆ.. ಮೊನ್ನೆ ತಾನೇ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವ ಪತ್ರಿಕಾಗೇೂಷ್ಟಿ ಸಂದರ್ಭದಲ್ಲಿ ಸಿನಿಮಾ ನಿದೇ೯ಶಕ ಎಸ್. ನಾರಾಯಣ ಪಕ್ಷದ ಅಧ್ಯಕ್ಷ ಡಿಕೆಶಿಯವರ ಹತ್ತಿರ ಹೇೂಗಿ ಕೂತು ಆನಂತರ ಎರಡೆರಡು ಬಾರಿ ಕುರ್ಚಿಗಾಗಿ ಹಿಂದೆ ಸರಿಯ ಬೇಕಾಯಿತು ಅಂದರೆ ಅದೆಷ್ಟು ಬೇಸರ ಮುಜುಗರ ಆಗಿಲಿರಕ್ಕಿಲ್ಲ ನಮ್ಮ ಖ್ಯಾತ ನಿರ್ದೇಶಕರಿಗೆ...?
ಅದೇ, ಇನ್ನೊಂದು ಪ್ರಸಂಗ ನೇೂಡಿ, ಇಂದು ಮಾಜಿ ಸಚಿವ ಎಚ್.ಡಿ. ರೇವಣ್ಣನವರು ಒಂದು ಧಾರ್ಮಿಕ ಸಭೆಗೆ ಹೇೂಗಿದ್ದರು. ಸಭೆಯಲ್ಲಿ ಕುರ್ಚಿ ತುಂಬಿ ಹೇೂಗಿತ್ತು. ರೇವಣ್ಣನವರು ಒಂದು ಮೂಲೆಯಲ್ಲಿ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತಿದ್ದರು. ಇದನ್ನು ದೂರದಲ್ಲಿ ಕಂಡ ಸುತ್ತೂರು ಮಠದ ಸ್ವಾಮಿಗಳು ನೇರವಾಗಿ ಅಲ್ಲಿಗೆ ಬಂದು ರೇವಣ್ಣ ನವರನ್ನು ಕೈಹಿಡಿದು ವೇದಿಕೆಗೆ ಕರೆದುಕೊಂಡು ಹೇೂಗಿ ತಮ್ಮ ಹತ್ತಿರದ ಆಸನದಲ್ಲಿಯೇ ರೇವಣ್ಣ ನವರನ್ನು ಕೂರಿಸಿಕೊಂಡರು. ಇದು ರೇವಣ್ಣನವರ ಮನಸ್ಸಿಗೆ ಎಷ್ಟು ಖುಶಿ ಕೊಟ್ಟಿರ ಬಹುದು ನೇೂಡಿ... ಇತ್ತೀಚಿನ ಈ ಎರಡು ಪ್ರಸಂಗಗಳನ್ನು ನೇೂಡಿದಾಗ ನಮ್ಮ ಹಿರಿಯ ಪ್ರಾಜ್ಞರ ಅನುಭವದ ಮಾತು ಎಷ್ಟು ಅರ್ಥಪೂರ್ಣ ಅನ್ನಿಸುವುದಿಲ್ಲವೇ?
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق