ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಖ್ಯಾತ ವಾಸ್ತು ತಜ್ಞ ಮಹೇಶ್ ಮುನಿಯಂಗಳ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಖ್ಯಾತ ವಾಸ್ತು ತಜ್ಞ ಮಹೇಶ್ ಮುನಿಯಂಗಳ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ



ಬೆಂಗಳೂರು: ಖ್ಯಾತ ವಾಸ್ತು ತಜ್ಞ, ಸಾವಿರಾರು ದೇವಸ್ಥಾನಗಳ ವಾಸ್ತು ಶಿಲ್ಪಿ, ಸುಬ್ರಹ್ಮಣ್ಯ ಬಳಿಯ ಕೈಕಂಬದ ಶ್ರೀ ಮಹೇಶ ಮುನಿಯಂಗಳ ಅವರಿಗೆ ಇಂದು ಬೆಂಗಳೂರಿನಲ್ಲಿ  ಗೌರವ ಡಾಕ್ಟರೇಟ್ ಪದವಿ ಲಭಿಸಿದೆ. ತಮಿಳುನಾಡಿನ ಹೊಸೂರಿನಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಚೆನ್ನೈನ ಏಶಿಯನ್ ವೇದಿಕ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಕೊಡಮಾಡಿದೆ. ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ  ಮಣಿಕಂಠ ಸುಬ್ರಹ್ಮಣ್ಯ, ಸೃಜನ್, ಭಾನುಪ್ರಕಾಶ್ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.


ಮಹೇಶ್ ಮುನಿಯಂಗಳ ಅವರು ಬಿಳಿನೆಲೆ ಗ್ರಾಮದ ಕೈಕಂಬದ ಗೋಪಾಲಿಯವರು. ಮೂಲತಃ ಕಾಸರಗೋಡು ಕಾನತ್ತೂರಿನ ಮುನಿಯಂಗಳದವರು.


ಇವರು ಹೊಸನಗರ ಶ್ರೀರಾಮಚಂದ್ರಾಪುರಮಠ, ಸುಬ್ರಹ್ಮಣ್ಯದ ಮಠ, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಾಸ್ತುಶಿಲ್ಪಿ ಆಗಿದ್ದಾರೆ.


ಪ್ರಸಿದ್ದ ದೇವಸ್ಥಾನಗಳಾದ  ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಆಸುಪಾಸಿನ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಕೊಲ್ಲೂರು ದೇವಸ್ಥಾನ, ಜೀರ್ಣೋದ್ಧಾರ ಗೊಳ್ಳುತ್ತಿರುವ  ಕುಂಭಾಶಿ ಚಂಡಿಕಾ ಪರಮೇಶ್ವರಿ ದೇವಸ್ಥಾನ, ಸುಳ್ಯ ತಾಲ್ಲೂಕಿನ ಹಲವು ದೇವಸ್ಥಾನಗಳ ವಾಸ್ತು ತಜ್ಞರಾಗಿದ್ದಾರೆ. 

    

ಸುಬ್ರಹ್ಮಣ್ಯದ ವನದುರ್ಗಾ ದೇವಿ ದೇವಸ್ಥಾನ, ಸೋಮನಾಥೇಶ್ವರ ದೇವಸ್ಥಾನ, ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ಪೆರುವಾಜೆ ಜಲದುರ್ಗಾ ದೇವಸ್ಥಾನ, ಚೆನ್ನಕೇಶವ ದೇವಸ್ಥಾನ ಸುಳ್ಯ, ಚೊಕ್ಕಾಡಿಯ ಶ್ರೀರಾಮ ದೇವಸ್ಥಾನ ಹೀಗೆ ಹತ್ತು ಹಲವು ದೇವಸ್ಥಾನಗಳ ವಾಸ್ತು ಹೇಳುವರಾಗಿದ್ದಾರೆ.


ಎಂ. ಸುಬ್ರಹ್ಮಣ್ಯ ಮುನಿಯಂಗಳ ಮತ್ತು ಸರಸ್ವತಿ ದಂಪತಿಗಳ ಪುತ್ರ, ಪತ್ನಿ ವಿದ್ಯಾಲಕ್ಷ್ಮೀ, ಮಗಳು ಮನಸಾದೇವಿ ಮತ್ತು ಮಗ ಕಾರ್ತಿಕೇಯ ಕುಮಾರಸ್ವಾಮಿ ವಿದ್ಯಾಲಯದ ಸುಬ್ರಹ್ಮಣ್ಯದ ವಿದ್ಯಾರ್ಥಿಗಳು.



0 تعليقات

إرسال تعليق

Post a Comment (0)

أحدث أقدم