ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮದುವೆಯಾಗಲಿಲ್ಲ ಎಂಬ ಚಿಂತೆಯಿಂದ ಯುವಕ ವಿಷ ಸೇವಿಸಿ ಆತ್ಮಹತ್ಯೆ

ಮದುವೆಯಾಗಲಿಲ್ಲ ಎಂಬ ಚಿಂತೆಯಿಂದ ಯುವಕ ವಿಷ ಸೇವಿಸಿ ಆತ್ಮಹತ್ಯೆ

 


ಚಾಮರಾಜನಗರ: ವಯಸ್ಸು 30 ದಾಟಿದರೂ ಮದುವೆಯಾಗಲಿಲ್ಲ ಎಂಬ ಚಿಂತೆಗೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಹನೂರಿನಲ್ಲಿ ನಡೆದಿದೆ.

ಹನೂರು ಪಟ್ಟಣದ ವಿನೋದ್ (34) ಮೃತ ದುರ್ದೈವಿ. ಅರಣ್ಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಳಿಕ ಬೆಂಗಳೂರಿನ‌ ಫ್ಯಾಕ್ಟರಿಯಲ್ಲಿ ಕೆಲಸ‌ ಮಾಡುತ್ತಿದ್ದರು.

ತನ್ನ ಸಹೋದರರು, ಸಹೋದರಿಯರಿಗೆ ವಿವಾಹವಾದರೂ ತನಗಿನ್ನೂ ಆಗಿಲ್ಲವೆಂಬ ಮಾನಸಿಕ ಖಿನ್ನತೆಯಿಂದ ಯುವಕ ಮದ್ಯ ವ್ಯಸನಿಯಾಗಿದ್ದರು.

ಅದೇ ಚಿಂತೆಯಲ್ಲಿ ಮದ್ಯದ ಅಮಲಿನಲ್ಲಿ ವಿಷ ಸೇವಿಸಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


hit counter

0 تعليقات

إرسال تعليق

Post a Comment (0)

أحدث أقدم