ಮಂಗಳೂರು: ಬಹುಕಾಲದ ಬೇಡಿಕೆಯಾಗಿದ್ದ ಅಳಪೆ ಸೂರ್ಯನಗರದ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಕಳೆದ 40 ವರ್ಷಗಳಿಂದ ಸಮರ್ಪಕವಾದ ರಸ್ತೆಯಿಲ್ಲದ ಸೂರ್ಯನಗರ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ್ದೇವೆ. ಅನೇಕ ಸವಾಲುಗಳ ನಡುವೆ ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ ಸಂತೃಪ್ತಿಯಿದೆ ಎಂದು ಶಾಸಕ ಕಾಮತ್ ಹೇಳಿದರು.
ಪ್ರತಿ ವಾರ್ಡಿನ ಅಭಿವೃದ್ಧಿಯೇ ನಗರದ ಬೆಳವಣಿಗೆಯ ಅಳತೆಗೋಲು. ಹಾಗಾಗಿ ನಗರದ ಪ್ರತಿಯೊಂದು ಭಾಗದ ಜನರ ಕಡೆಗೂ ಗಮನ ನೀಡಲಾಗಿದ್ದು ಜನರ ಬೇಡಿಕೆಗಳನ್ನು ಈಡೇರಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಸ್ಥಳೀಯ ಕಾರ್ಪೋರೇಟರ್ ರೂಪಶ್ರೀ ಪೂಜಾರಿ ಮಾತನಾಡಿ, ಸೂರ್ಯನಗರಕ್ಕೆ ಸರಿಯಾದ ರಸ್ತೆಯಿಲ್ಲದೆ ಜನರು ಸಂಕಷ್ಟಪಡುವ ಕುರಿತು ಶಾಸಕರಲ್ಲಿ ಮಾಡಿಕೊಂಡ ಮನವಿಯಂತೆ ಶಾಸಕರು ಇಂದು ರಸ್ತೆಯ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಸೂರ್ಯನಗರದ ಜನರ ಪರವಾಗಿ ಶಾಸಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಸಂತ್ ಜೆ ಪೂಜಾರಿ, ಶರಣ್ ಸರಿಪಲ್ಲ, ಸುರೇಶ್ ಆಚಾರ್, ನರೇಶ್ ಸರಿಪಲ್ಲ, ಸುರೇಶ್ ಸೂರ್ಯನಗರ, ಚೇತನ್ ಸೂರ್ಯನಗರ, ಕಿಶೋರ್ ಶೆಟ್ಟಿ ಸೂರ್ಯನಗರ, ಭವಿತ್ ಸೂರ್ಯನಗರ, ಕಿಶೋರ್ ಸೂರ್ಯನಗರ, ಮಧು ಸೂರ್ಯನಗರ, ಸ್ಥಳೀಯರೀದ ಸುಂದರಿ ಶೆಟ್ಟಿ, ವಿನ್ಸೆಂಟ್ ಕುಟಿನೋ ಮತ್ತು ಸೂರ್ಯನಗರದ ನಿವಾಸಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق