ಬ್ರಹ್ಮಾವರ: ಭೂಮಿಕಾ ಹಾರಾಡಿ ಪ್ರತಿ ವರ್ಷ ನಡೆಸುತ್ತಿರುವ ಬಣ್ಣ ಪಂಚದಿನ ನಾಟಕೋತ್ಸವ ಮಾ. 30ರಿಂದ ಎ.3ರವರೆಗೆ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಜರಗಲಿದೆ.
ಮಾ.30ರಂದು ಶ್ರೀ ದುರ್ಗಾಕಲಾ ತಂಡ ಹಾರಾಡಿ ಅಭಿನಯದ ಒಂದಲ್ಲಾ ಒಂದ್ ಸಮಸ್ಯೆ, ಮಾ. 31ರಂದು ಭೂಮಿಕಾ ಹಾರಾಡಿ ಅಭಿನಯದ ಆರದಿರಲಿ ಬೆಳಕು, ಎ.1 ರಂದು ಸುಮನಸಾ ಕೊಡವೂರು ಅಭಿನಯದ ಕಾಪ, ಎ.2ರಂದು ಭೂಮಿಕಾ ಹಾರಾಡಿ ಅಭಿನಯದ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಮತ್ತು ಎ.3ರಂದು ರಂಗಭೂಮಿ ಉಡುಪಿ ಅಭಿನಯದ ವಿ.ಶಾಂ.ಕೇ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق