ಬೆಂಗಳೂರು: ಗಂಡ ಮಾಡಿದ ತಪ್ಪಿಗೆ ಹೆಂಡತಿಯನ್ನು ಪೊಲೀಸರು ಠಾಣೆಗೆ ಎಳೆದುಕೊಂಡು ಹೋಗಿದ್ದರು. ಈ ಅವಮಾನ ತಾಳಲಾರದೇ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನೆಲಮಂಗಲದಲ್ಲಿ ನಡೆದಿದೆ.
35 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು. ಈಕೆಯ ಗಂಡ 1 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ಈ ಸಾಲ ತೀರಿಸುವಂತೆ ಸಾಲ ಕೊಟ್ಟ ವ್ಯಕ್ತಿ ಪೊಲೀಸರ ಮೂಲಕ ಕಿರುಕುಳ ಕೊಟ್ಟಿದ್ದಾರೆ.
ಗಂಡ ಮನೆಯಲ್ಲಿಲ್ಲದ ವೇಳೆ ಹೆಂಡತಿಯನ್ನು ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿ, ಮನೆಗೆ ವಾಪಸಾದ ಮೇಲೆ ಆಕೆಯನ್ನು ನೆರೆಹೊರೆಯವರು ವಂಚಕನ ಹೆಂಡತಿ ಎಂದು ಅವಮಾನ ಮಾಡುತ್ತಿದ್ದರು.
ಇದರಿಂದ ಬೇಸರಗೊಂಡ ಮಹಿಳೆ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾಳೆ.
إرسال تعليق