ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೌಟುಂಬಿಕ ಕಲಹ; ಗೃಹಿಣಿ ಡೆತ್ ನೋಟ್ ಬರೆದು ನೇಣು ಬಿಗಿದು ಆತ್ಮಹತ್ಯೆ

ಕೌಟುಂಬಿಕ ಕಲಹ; ಗೃಹಿಣಿ ಡೆತ್ ನೋಟ್ ಬರೆದು ನೇಣು ಬಿಗಿದು ಆತ್ಮಹತ್ಯೆ

 


ಎಚ್‌.ಡಿ.ಕೋಟೆ: ಕೌಟುಂಬಿಕ ಕಲಹದ ಹಿನ್ನೆಲೆ ಗೃಹಿಣಿ ಡೆತ್‌ನೋಟ್‌ ಬರೆದು ಮನೆಯಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿರುವ ಘಟನೆಯೊಂದು ತಾಲೂಕಿನ ತೆರಣಿಮುಂಟಿ ಗ್ರಾಮದಲ್ಲಿ ಜರುಗಿದೆ.

ತೆರಣಿಮುಂಟಿ ಗ್ರಾಮದ ಶಂಕರ್‌ ಪತ್ನಿ ಪವಿತ್ರ ಆತ್ಮಹತ್ಯೆಗೆ ಶರಣಾದ ಗೃಹಿಣಿ.

ಈಕೆ‌ 2 ವರ್ಷಗಳ ಹಿಂದೆ ಶಂಕರ್‌ ಜೊತೆಗೆ ವಿವಾಹವಾಗಿದ್ದರು. ಮದ್ಯ ವ್ಯಸನಿಯಾಗಿದ್ದ ಪತಿ ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು. ಈ ಬಗ್ಗೆ ಹಲವಾರು ಬಾರಿ ಬುದ್ಧಿ ಹೇಳಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇದರಿಂದಾಗಿ ಮನನೊಂದ ಪವಿತ್ರ ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ “ನನ್ನ ಸಾವಿಗೆ ನನ್ನ ಪತಿಯೇ ಕಾರಣ’ ಎಂದು ಡೆತ್‌ ನೋಟ್‌ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸರಗೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಡೆತ್‌ ನೋಟ್‌ ಸಿಕ್ಕಿದೆ. ಡೆತ್‌ನೋಟ್‌ ಆಧಾರದ ಮೇಲೆ ಪತಿ ಶಂಕರನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

hit counter

0 تعليقات

إرسال تعليق

Post a Comment (0)

أحدث أقدم