ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ ಪರ್ಯಾಯ: ಸಹಕರಿಸಿದ ಎಲ್ಲರಿಗೆ ಶ್ರೀಗಳ ಕೃತಜ್ಞತೆ

ಉಡುಪಿ ಪರ್ಯಾಯ: ಸಹಕರಿಸಿದ ಎಲ್ಲರಿಗೆ ಶ್ರೀಗಳ ಕೃತಜ್ಞತೆ


ಉಡುಪಿ: ಶ್ರೀಕೃಷ್ಣಮಠದಲ್ಲಿ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪರ್ಯಾಯೋತ್ಸವದ ಸಂದರ್ಭದಲ್ಲಿ, ಎಲ್ಲ ರೀತಿಯಲ್ಲೂ ಸಹಕರಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತದ ಎಲ್ಲ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.


ಮಠದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಬಂಧಿತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು,  ಪರ್ಯಾಯದ ಸಂದರ್ಭದಲ್ಲಿ ಸರಕಾರದ ಕೋವಿಡ್ ನಿಯಮಾವಳಿಗಳಿಗೆ ಅನುಸಾರವಾಗಿ ಮಠಕ್ಕೂ, ಭಕ್ತಜನರಿಗೂ ಯಾವುದೇ ತೊಂದರೆಯಾಗದಂತೆ ಎಲ್ಲರೀತಿಯ ಸಹಕಾರವನ್ನು ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದೀರಿ, ದೇವರು ಎಲ್ಲರನ್ನು ಅನುಗ್ರಹಿಸಲಿ ಎಂದು ಶ್ರೀಕೃಷ್ಣ ಪ್ರಸಾದವನ್ನಿತ್ತು ಹರಸಿದರು.


ಈ ಸಂದರ್ಭದಲ್ಲಿ ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳಾದ ಕೂರ್ಮಾರಾವ್, ಪರ್ಯಾಯ ಶ್ರೀಪಾದರು, ಶಾಸಕರು, ಮಠದ ಅಧಿಕಾರಿಗಳು ಮತ್ತು ಪರ್ಯಾಯೋತ್ಸವ ಸಮಿತಿಯ ಎಲ್ಲ ಪದಾಧಿಕಾರಿಗಳ ಸಹಕಾರದೊಂದಿಗೆ ಕಾನೂನು ಸುವ್ಯಸ್ಥೆಯನ್ನು ಪಾಲಿಸಲು ಅನುಕೂಲವಾಯಿತು, ಮುಂದೆಯೂ ಇದೇ ಸಹಕಾರವನ್ನು ಕೋರುತ್ತೇವೆ ಎಂದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರ್ಷವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ತಹಸೀಲ್ದಾರರಾದ ಪ್ರದೀಪ್ ಕುರ್ಡೇಕರ್ ಹಾಗೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ತಾಲೂಕು ಕಚೇರಿಯ ಎಲ್ಲ ಸಿಬ್ಬಂದಿಯವರಿಗೂ ಪರ್ಯಾಯ ಶ್ರೀಪಾದರು ಶ್ರೀಕೃಷ್ಣಪ್ರಸಾದ ನೀಡಿದರು. ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ಸೂರ್ಯನಾರಾಯಣ ಉಪಾಧ್ಯಾಯರು, ಕಾರ್ಯದರ್ಶಿ ವಿಷ್ಣುಪ್ರಸಾದ ಪಾಡಿಗಾರ್, ರಾಘವೇಂದ್ರ ರಾವ್, ಲಕ್ಸ್ಮಿನಾರಾಯಣ ಕೆ.ವಿ. ವಾಸುದೇವ ಪೆರಂಪಳ್ಳಿ, ರಾಜಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم