ಉಡುಪಿ: ಶ್ರೀ ಕೃಷ್ಣಮಠಕ್ಕೆ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ಆಗಮಿಸಿದರು. ಅವರನ್ನು ವಾದ್ಯ ಘೋಷ ಗಳಿಂದ ಸ್ವಾಗತಿಸಿದರು
ಶ್ರೀಮಠದ ದಿವಾನ ವರದರಾಜ ಭಟ್ ಮತ್ತು ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು ಬರಮಾಡಿಕೊಂಡು ದೇವರ ದರ್ಶನ ಮಾಡಿಸಿದರು.
ಅನಂತರ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
Post a Comment