ಬೆಂಗಳೂರು: ಸಾವಿರ ಕನಸುಗಳನ್ನು ಹೊತ್ತು ಸುಖಜೀವನ ನಡೆಸಬೇಕಿದ್ದ ಯುವತಿಯ ಬಾಳಲ್ಲಿ ವಿಧಿಯಾಟ ನಡೆಯಿತು. ಯುವತಿ ಮದುವೆ ರಿಸೆಪ್ಷನ್ ವೇಳೆ ಕುಸಿದು ಬಿದ್ದು ಅಸ್ವಸ್ಥಳಾಗಿದ್ದಾಳೆ.
ತಕ್ಷಣ ಆಕೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರು ಮದುಮಗಳನ್ನು ಪರೀಕ್ಷಿಸಿ ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಿದ್ದಾರೆ. ಈ ರೀತಿಯ ಘಟನೆ ನಡೆದಿರುವುದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ.
26 ವರ್ಷದ ಚೈತ್ರ ಬ್ರೈನ್ ಡೆಡ್ ಆಗಿ ಮೃತಪಟ್ಟವಳು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದವರಾಗಿದ್ದು, ಅರತಕ್ಷತೆಯ ದಿನದಂದು ಮದುಮಗಳು ನಿಧನ ಹೊಂದಿದಳು.
ಆಕೆಯ ಪೋಷಕರು ಚೈತ್ರಾಳ ಅಂಗಾಗ ದಾನಕ್ಕೆ ನಿರ್ಧಾರ ಮಾಡಿದ್ದಾರೆ. ಈ ಕರುಣಾಜನಕ ಮಾಹಿತಿಯನ್ನು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
Post a Comment