ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಮೃತ ಸಂಜೀವಿನಿ-ಅಮೃತೋತ್ಸವ ನಾಳೆ

ಅಮೃತ ಸಂಜೀವಿನಿ-ಅಮೃತೋತ್ಸವ ನಾಳೆ



ಕಣ್ಣೂರು (ಮಂಗಳೂರು): ಸಮಾಜದ ಅಶಕ್ತ ಕುಟುಂಬವನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ಚಾಚಬೇಕೆನ್ನುವ ಉದ್ದೇಶದಿಂದ ಸಮಾನ ಮನಸ್ಕ ಯುವಕರನ್ನು ಒಗ್ಗೂಡಿಸಿ ಕಳೆದ 6 ವರ್ಷಗಳಿಂದ ಕಾರ್ಯಾಚರಿಸುವ ಸಂಸ್ಥೆ ಅಮೃತಸಂಜೀವಿನಿ. 


ಅಮೃತಸಂಜೀವಿನಿ ರಿ. ತನ್ನ ಸೇವಾ ಪಯಣದಲ್ಲಿ ಇದುವರೆಗೆ 74 ಮಾಸಿಕ ಯೋಜನೆ, 242 ಸೇವಾ ಯೋಜನೆ, 204 ತುರ್ತು ಯೋಜನೆಯೊಂದಿಗೆ ಒಟ್ಟು 446 ಕುಟುಂಬಗಳಿಗೆ 01 ಕೋಟಿ 11 ಲಕ್ಷದಷ್ಟು ಹಣವನ್ನು ಸಮಾಜಕ್ಕಾಗಿ ಮೀಸಲಿರಿಸಿದೆ.


ಅಮೃತಸಂಜೀವಿನಿ ಸಂಸ್ಥೆಯ ತನ್ನ 75ನೇ ಯೋಜನೆಯನ್ನು ಸಂಸ್ಥೆಯ ಅಂಗಸಂಸ್ಥೆ ವೀರಕೇಸರಿ ಕಣ್ಣೂರು ನೇತೃತ್ವದಲ್ಲಿ ಅಮೃತ ಮಹೋತ್ಸವ ಎನ್ನುವ ಕಾರ್ಯಕ್ರಮವನ್ನು ಲಕ್ಷ್ಮೀ ನಾರಾಯಣ ಸಭಾಭವನ ಪಡೀಲ್ ಕಣ್ಣೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.


ಈ ವೇದಿಕೆಯಲ್ಲಿ ಒಟ್ಟು 30 ಅಶಕ್ತ ಕುಟುಂಬಗಳಿಗೆ ನೆರವಾಗುವ ಮಹತ್ತರ ಉದ್ದೇಶವನ್ನು ಹೊಂದಿದೆ.


ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾರ್ಗದರ್ಶಕರಾದ ವಜ್ರದೇಹಿ‌ ಮಠದ ಶ್ರೀ ರಾಜಶೇಖರನಂದ ಸ್ವಾಮೀಜಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಲ್ಲಡ್ಕ ಪ್ರಭಾಕರ ಭಟ್, ಪದ್ಮಶ್ರೀ ಪ್ರಶಸ್ತಿಗೆ ಭಾಜನಾರಾಗಲಿರುವ ಮಹಾಲಿಂಗ ನಾಯ್ಕ್ ಅಮೈ, ಸಂತೋಷ್ ಕುಮಾರ್ ಶೆಟ್ಟಿ, ಚಿರಾಗ್ ಆಚಾರ್ಯ, ಭೋಜರಾಜ್ ವಾಮಂಜೂರು ಮುಂತಾದ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post