ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅತಿಥಿ ಉಪನ್ಯಾಸಕಿ ನೇಣು ಬಿಗಿದು ಆತ್ಮಹತ್ಯೆ

ಅತಿಥಿ ಉಪನ್ಯಾಸಕಿ ನೇಣು ಬಿಗಿದು ಆತ್ಮಹತ್ಯೆ

 


ಬೇಲೂರು: ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸರ್ವೋದಯ ಕಾಲೇಜಿನಲ್ಲಿ 4 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಉಮೆಯಾನಿ (30) ಮಂಗಳವಾರ ರಾತ್ರಿ ತಮ್ಮ ತಾಯಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರಿನವರಾದ ಉಮೆಯಾನಿ ಕಳೆದ ಒಂದು ವರ್ಷದಿಂದ ಬೇಲೂರಿನ ವೈಡಿಡಿ ಪ್ರಥಮದರ್ಜೆ ಕಾಲೇಜು ಹಾಗೂ ಸರ್ವೋದಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. 

ಕೆಲವು ದಿನಗಳ ಹಿಂದೆ ಸರ್ಕಾರಿ ಉಪನ್ಯಾಸಕರ ಆಯ್ಕೆಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಕರೆದಿದ್ದು, ಇವರು ಸಹ ಅರ್ಜಿ ಸಲ್ಲಿಸಿದ್ದರು. 

ಆದರೆ, ಇವರು ಆಯ್ಕೆಯಾಗಿರಲಿಲ್ಲ. ಇದರಿಂದ ಮನನೊಂದು ಚಿಕ್ಕಮಗಳೂರಿನ ತಮ್ಮ ತಾಯಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

0 تعليقات

إرسال تعليق

Post a Comment (0)

أحدث أقدم