ಚಿಕ್ಕಮಗಳೂರು: ತಾಲ್ಲೂಕಿನ ದತ್ತಪೀಠ ಮಾರ್ಗದ ಕವಿಕಲ್‍ಗಂಡಿ ಹಾಗೂ ಅತ್ತಿಗುಂಡಿ ಸಮೀಪದ ರಸ್ತೆಗಳಲ್ಲಿ ಮರವನ್ನು ಹೊತ್ತು ಒಯ್ಯುವ ಲಾರಿಗಳ ಸಂಚಾರದಿಂದ ರಸ್ತೆ ಕುಸಿತಗೊಳ್ಳುತ್ತಿದ್ದು ಕೂಡಲೇ ಹೆಚ್ಚು ಭಾರವನ್ನು ಹೊತ್ತೋಯ್ಯುವ ವಾಹನ ಸಂಚಾರವನ್ನು ನಿಷೇಧಿಸುವಂತೆ ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರಿಗೆ ಇಂದು ಮನವಿ ಸಲ್ಲಿಸಿದ ವೇದಿಕೆ ಕೆ.ಎಸ್. ಗುರುವೇಶ್ ಹೆಚ್ಚು ಭಾರವನ್ನು ಹೊತ್ತು ಅನೇಕ ಲಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದರಿಂದ ರಸ್ತೆ ಹೆಚ್ಚಾಗಿ ಕುಸಿತಗೊಂಡರೆ ಸಂಚಾರವೇ ಸ್ಥಗಿತ ಸಂಭವವಿದೆ ಎಂದರು.
ಅತ್ತಿಗುಂಡಿ, ಸಂಪಿಗೆಕಟ್ಟೆ ಹಾಗೂ ಮಹಲುಗಳಿಂದ ಅನೇಕ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಆರೋಗ್ಯ, ಅರಣ್ಯ ಸಿಬ್ಬಂದಿಯವರು ಪ್ರತಿನಿತ್ಯ ಸಂಚರಿಸುತ್ತಿರುತ್ತಾರೆ. ಈ ರಸ್ತೆ ಸ್ಥಗಿತಗೊಂಡರೆ ಸ್ಥಳೀಯ ನಿವಾಸಿಗಳು ಸುಮಾರು 50 ಕಿ.ಮೀ. ಹೆಚ್ಚು ಸುತ್ತಿಕೊಂಡು ನಗರಕ್ಕೆ ಬರಬೇಕಾಗುವ ಪರಿಸ್ಥಿತಿ ನಿರ್ಮಾಣ ವಾಗಬಹುದು ಎಂದು ಹೇಳಿದರು.
ಆದ್ದರಿಂದ ಈ ಮಾರ್ಗದಲ್ಲಿ ಕಡಿಮೆ ಭಾರವನ್ನು ಹೊತ್ತು ಒಯ್ಯುವ ವಾಹನಗಳಿಗೆ ಸಂಚರಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق