ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಂಟ್ವಾಳ: ಕಾರಿಂಜ ಕ್ಷೇತ್ರ ಸಂರಕ್ಷಣೆಗೆ 4ನೇ ಹಂತದ ಹೋರಾಟ

ಬಂಟ್ವಾಳ: ಕಾರಿಂಜ ಕ್ಷೇತ್ರ ಸಂರಕ್ಷಣೆಗೆ 4ನೇ ಹಂತದ ಹೋರಾಟ

27ರಂದು ಶಿವ ಮಾಲಾಧಾರಣೆ, ಮಾ.1ರಂದು ಕಾರಿಂಜ ಯಾತ್ರೆ



ಬಂಟ್ವಾಳ: ಇಲ್ಲಿನ ಹಿಂದೂ ಜಾಗರಣಾ ವೇದಿಕೆ ಮತ್ತು ಕಾರಿಂಜ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಕಾರಿಂಜ ಕ್ಷೇತ್ರದ ಸಂರಕ್ಷಣೆ ಮತ್ತು ಪಾವಿತ್ರ್ಯತೆ ಉಳಿಸುವ ನಿಟ್ಟಿನಲ್ಲಿ ಜನಾಂದೋಲನ ನಡೆಸಲು 4ನೇ ಹಂತದ ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿರುವುದಾಗಿ ಹಿಂದೂ ಜಾಗರಣೆ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ.


ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದೇ 27ರಂದು ಶಿವ ಮಾಲಾಧಾರಣೆ ಮತ್ತು ವೃತಾಚಾರಣೆಯೊಂದಿಗೆ ಕೋಟಿ ನಾಮ ಸಂಕೀರ್ತನೆ ಸಹಿತ ಮಾ.1ರಂದು ಕಾರಿಂಜ ಯಾತ್ರೆ ಕೈಗೊಳ್ಳಲಾಗುವುದು ಎಂದರು.


ಈಗಾಗಲೇ ಕ್ಷೇತ್ರದ ಪರಿಸರದಲ್ಲಿ ನಡೆಯತ್ತಿದ್ದ ಅಕ್ರಮ ಗಣಿಗಾರಿಕೆ ಸ್ಥಗಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಗಣಿಗಾರಿಕೆ ಶಾಶ್ವತ ಸ್ಥಗಿತಗೊಳಿಸಬೇಕು ಎಂಬುದು ನಮ್ಮ ಅಪೇಕ್ಷೆ. ಈ ಬಗ್ಗೆ ಹಿಂದೂ ಸಮಾಜದ ಸ್ಥಳೀಯ ಭಜನಾ ಮಂದಿರ, ದೇವಸ್ಥಾನ ಅಥವಾ ಮನೆಯಲ್ಲೇ 108 ಬಾರಿ ಶಿವನಾಮ ಜಪಿಸುವಂತೆ ಮನವಿ ಮಾಡಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್ ನೆತ್ತರಕರೆ, ನರಸಿಂಹ ಮಾಣಿ, ಪ್ರಶಾಂತ್ ಕೆಂಪುಗುಡ್ಡೆ, ರಾಜೇಶ್ ಬೊಳ್ಳುಕಲ್ಲು ಇದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



free counter

0 تعليقات

إرسال تعليق

Post a Comment (0)

أحدث أقدم