ಸ್ಥಳೀಯರಿಂದ ದಿಢೀರ್ ಪ್ರತಿಭಟನೆ; ತಹಶೀಲ್ದಾರ್, ಡಿ.ಸಿ. ಬರಲು ಆಗ್ರಹ
ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮದ ಏಲಬೆ ಎಂಬಲ್ಲಿ ಕಪ್ಪು ಕಲ್ಲಿನ ಕ್ವಾರೆ ಗುಂಡಿಗೆ ಬಿದ್ದು ಬಾಲಕ ಸಹಿತ ಇಬ್ಬರು ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ಸ್ಥಳೀಯ ಬೋರುಗುಡ್ಡೆ ನಿವಾಸಿ ಜಗ್ಗು ಯಾನೆ ಜಗದೀಶ್ (40) ಮತ್ತು ಇವರ ಸಂಬಂಧಿ ನಿಧೀಶ್ ನಾವೂರು (17) ಎಂದು ಗುರುತಿಸಲಾಗಿದೆ. ನಿಧೀಶ್ ನಾವೂರು ಪ್ರಥಮ ಪಿಯುಸಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಇವರು ಸ್ಥಳೀಯ ಏಲಬೆ ಎಂಬಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿರುವ ಸಾಧ್ಯತೆ ಇದೆ ಎಂದು ಮೃತದೇಹ ಮೇಲೆತ್ತಿದ ಸ್ಥಳೀಯರು ತಿಳಿಸಿದ್ದಾರೆ.
ಪ್ರತಿಭಟನೆ: ಇಲ್ಲಿನ ನರಿಕೊಂಬು ಗ್ರಾಮ ಪಂಚಾಯಿತಿ ಪರವಾನಿಗೆ ಇಲ್ಲದೆ ಕಪ್ಪು ಕಲ್ಲಿನಕ್ವಾರೆ ನಡೆಯುತ್ತಿದ್ದು,
ಸ್ಥಳೀಯರ ಆಕ್ಷೇಪದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆಯಷ್ಟೇ ಕ್ವಾರೆ ಸ್ಥಗಿತಗೊಂಡಿದ್ದರೂ ಸುತ್ತಲೂ ತಡೆ ಬೇಲಿ ಹಾಕಿಲ್ಲ. ಈ ಅಕ್ರಮ ಕ್ವಾರೆಗೆ ತಹಶೀಲ್ದಾರ್ ಸಹಿತ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೇರ ಹೊಣೆ. ಇದೀಗ ಘಟನಾ ಸ್ಥಳಕ್ಕೆ ಕೇವಲ ಪೊಲೀಸರು ಮಾತ್ರ ಬಂದಿದ್ದಾರೆ.
ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಬರುವ ತನಕ ಮೃತದೇಹ ಮುಟ್ಟಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದಾಗಿ ಇಬ್ಬರು ಅಮಾಯಕರ ಸಾವು ಉಂಟಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق