ನಿಟ್ಟಿ: "ಪ್ರಾಧ್ಯಾಪಕರ ತರಬೇತಿ ಶಿಬಿರಗಳು ವಿವಿಧ ವಿಶಿಷ್ಟ ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ತಂತ್ರಜ್ಞಾನದ ಬೆಳವಣಿಗೆಯ ಸಂದರ್ಭದಲ್ಲಿ ವಿವಿಧ ಆಯಾಮಗಳನ್ನು ಹಾಗೂ ಉಪಯೋಗಗಳನ್ನು ಈ ತರಬೇತಿಗಳು ನಮಗೆ ಪರಿಚಯಿಸುತ್ತದೆ" ಎಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಅಭಿಪ್ರಾಯಪಟ್ಟರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್‍ಸೈನ್ಸ್ ವಿಭಾಗವು ಬೆಂಗಳೂರಿನ ಡಿಲೈಟ್ ಕನ್ಸಲ್ಟೆನ್ಸಿ ಸರ್ವೀಸಸ್ ಪ್ರೈ.ಲಿ ನ ಸಹಯೋಗದೊಂದಿಗೆ ಫೆ.15 ರಿಂದ 5 ದಿನಗಳ ಕಾಲ ಹಮ್ಮಿಕೊಂಡಿರುವ ‘ಮೈಕ್ರೋಕಂಟ್ರೋಲರ್ಸ್ & ಪೆರಿಫೆರಲ್ಸ್’ ಎಂಬ ವಿಷಯದ ಪ್ರಾಧ್ಯಾಪಕರ ತರಬೇತಿ ಶಿಬಿರದಲ್ಲಿ ಡಿಲೈಟ್ ಸಂಸ್ಥೆಯ ಮೈಕ್ರೋಕಂಟ್ರೋಲರ್ ಟ್ರೈನರ್ ಕಿಟ್‍ನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಡಿಲೈಟ್ ಕನ್ಸಲ್ಟೆನ್ಸಿ ಸರ್ವೀಸಸ್ ಪ್ರೈ.ಲಿ ಸಂಸ್ಥೆಯ ವತಿಯಿಂದ ನಿಟ್ಟೆ ತಾಂತ್ರಿಕ ಕಾಲೇಜಿಗೆ ಸುಮಾರು 1 ಲಕ್ಷ ರೂ ಮೌಲ್ಯದ ಮೈಕ್ರೋಕಂಟ್ರೋಲರ್ ಟ್ರೈನರ್ ಕಿಟ್‍ಗಳನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಡಿಲೈತ್ ಸಂಸ್ಥೆಯ ಶ್ರೀಧರ್ ಮೂರ್ತಿ, ಅರುಣ್ ಹಾಗೂ ವಿಜಯ್ ಉಪಸ್ಥಿತರಿದ್ದರು. ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ಈ ಕಿಟ್‍ನ ಬಳಕೆಯ ಹಾಗೂ ತಂತ್ರಜ್ಞಾನದ ಬಗೆಗೆ ಈ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಡಲಿರುವರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ| ಐ ಆರ್ ಮಿತ್ತಂತಾಯ ಹಾಗೂ ಡಾ. ಶ್ರೀನಿವಾಸ ರಾವ್ ಬಿ ಆರ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್‍ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ.ಜ್ಯೋತಿ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ರೋಶನ್ ಫೆರ್ನಾಂಡಿಸ್ ವಂದನಾರ್ಪಣೆ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ನಡೆಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق