ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನ | ಬ್ರಹ್ಮಕಲಶ, ಧಾರ್ಮಿಕ ಸಭೆ

ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನ | ಬ್ರಹ್ಮಕಲಶ, ಧಾರ್ಮಿಕ ಸಭೆ

ಎಲ್ಲರನ್ನೂ ಬದುಕಲು ಬಿಡುವುದೇ ನೈಜ ಧರ್ಮ: ಶ್ರೀಕಾಂತ್ ಶೆಟ್ಟಿ ಕಾರ್ಕಳ


ಬಂಟ್ವಾಳ ತಾಲೂಕಿನ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಗುರುವಾರ ನಡೆದ ಥಾರ್ಮಿಕ ಸಭೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ ಮಾತನಾಡಿದರು. ಸಮಿತಿ ಅಧ್ಯಕ್ಷ ರಘು ಎಲ್.ಶೆಟ್ಟಿ, ಗೌರವಾಧ್ಯಕ್ಷ ಬಿ.ರಮಾನಾಥ ರೈ ಮತ್ತಿತರರು ಇದ್ದಾರೆ.

ಬಂಟ್ವಾಳ: ಋಷಿ ಪರಂಪರೆ ಮತ್ತು ಜಾನಪದ ಮೂಲಕ ಬಂದಿರುವ ಇಲ್ಲಿನ ದೈವ ದೇವರ ಆರಾಧನೆ ಮತ್ತು ಶ್ರದ್ಧಾ ಭಕ್ತಿಗೆ ವೈಜ್ಞಾನಿಕವಾಗಿಯೂ ಸಮರ್ಥನೆ ಇದೆ. ತಾನು ಬದುಕಿ ಇತರರನ್ನು ಕೂಡಾ ಬದುಕಲು ಬಿಡುವುದು ನಿಜವಾದ ಧರ್ಮ ಎಂದು ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದಾರೆ.


ಇಲ್ಲಿನ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.


ತ್ಯಾಗದ ಸಂಕೇತ ಕೇಸರಿ ಬಣ್ಣಕ್ಕೆ ದೇಶದ ಜಾತ್ಯತೀತ ಪರಂಪರೆ ಉಳಿಸುವ ಮಹತ್ತರ ಜವಾಬ್ದಾರಿಯೂ ಇದೆ ಎಂದರು.


ಬ್ರಹ್ಮಕಲೋತ್ಸವ ಸಮಿತಿ  ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪುರಾತನ ಹಿನ್ನೆಲೆ ಹೊಂದಿರುವ ಹಿಂದೂ ಧರ್ಮದ ದೈವಸ್ಥಾನಗಳಿಗೆ ಈಗಿನ ಧಾರ್ಮಿಕ ಪರಿಷತ್ ಅನಗತ್ಯ ಎಂದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ಮಂಗಳೂರು ಎ.ಜೆ.ಸಮೂಹ ಸಂಸ್ಥೆ ಮುಖ್ಯಸ್ಥ ಎ.ಜೆ.ಶೆಟ್ಟಿ, ಮಾಜಿ‌ ಮೇಯರ್ ಭಾಸ್ಕರ್ ಕೆ. ಶುಭ ಹಾರೈಸಿದರು.


ಗ್ರಾಮ ಪಂಚಾಯಿತಿ  ಅಧ್ಯಕ್ಷ ಜಿ.ಪ್ರಕಾಶ್ ಆಳ್ವ, ಬಂಟ್ವಾಳ ತಾಲೂಕು ಬಂಟರ ಸಂಘದ ಚಂದ್ರಹಾಸ ಶೆಟ್ಟಿ ರಂಗೋಲಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಉದ್ಯಮಿ ನಿತ್ಯಾನಂದ ಮಲ್ಲಿ ಮುಂಬೈ, ದೀಪಕ್ ಶೆಟ್ಟಿ ಮಂಗಳೂರು, ಕೃಷ್ಣ ವೈ.ಶೆಟ್ಟಿ ಮುಂಬೈ, ವ್ಯವಸ್ಥಾಪನಾ ಸಮಿತಿ ಸದಸ್ಯ ಬಾರಿ ಭಂಡಾರಿ ಮೇಗಿನಮನೆ ಮತ್ತಿತರರು ಇದ್ದರು.


ದೀಕ್ಷಾ ಮತ್ತು ರಕ್ಷಾ ಪ್ರಾರ್ಥಿಸಿದರು. ವ್ಯವಸ್ಥಾಪನಾ ‌ಸಮಿತಿ ಅಧ್ಯಕ್ಷ ರಘು ಎಲ್.ಶೆಟ್ಟಿ ದೇವಸ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ ವಂದಿಸಿದರು. ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಮತ್ತು ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು.


ನಡ್ವಂತಾಡಿ ಉದಯ ಪಾಂಗಣ್ಣಾಯ ಇವರ ಮಾರ್ಗದರ್ಶನದಲ್ಲಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನೆರವೇರಿತು. ಭಾಗವತ ಪಟ್ಲ ಸತೀಶ ಶೆಟ್ಟಿ ನೇತೃತ್ವದಲ್ಲಿ "ಕೃಷ್ಣ ಸಂಧಾನ" ಯಕ್ಷಗಾನ ತಾಳಮದ್ದಳೆ ನಡೆಯಿತು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم