ಹಾಸನ: ನಾಪತ್ತೆಯಾಗಿದ್ದ ಕುಶಾಲನಗರ ಟ್ರಾಫಿಕ್ ಎಎಸ್‌ಐ ಇದೀಗ ಶವವಾಗಿ ಪತ್ತೆಯಾಗಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಟ್ರಾಫಿಕ್ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್, ಏಕಾಏಕಿ ನಾಪತ್ತೆಯಾಗಿದ್ದರು. ಕುಟುಂಬದವರು ಹಾಗೂ ಪೊಲೀಸರು ಕೂಡ ಅವರಿಗಾಗಿ ಹುಡುಕಾಟ ನಡೆಸಿದ್ದರು. ಆದರೂ ಸಿಗಲಿಲ್ಲ.
ಇದೀಗ ಹಾಸನದ ಕಾಡ್ಲೂರು ಬಳಿಯ ಕಾವೇರಿ ನದಿಯಲ್ಲಿ ಎಎಸ್‌ಐ ಸುರೇಶ್ ಶವ ಪತ್ತೆಯಾಗಿದೆ. ಈ ಬಗ್ಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
Post a Comment