ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಘಟಕದ ದಿ|| ರಾಜೇಶ್ ಮೆ.ನಂ 819 ಇವರು 29-05-2018 ರಲ್ಲಿ ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಪಘಾತದಲ್ಲಿ ಮರಣ ಹೊಂದಿದ್ದು, ಇವರಿಗೆ ಸರಕಾರದಿಂದ 5 ಲಕ್ಷ ಪರಿಹಾರ ಧನವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಇವರು ಪರಿಹಾರಧನವನ್ನು ದೊರಕಿಸಿ ಕೊಡುವಲ್ಲಿ ಸರಕಾರದಿಂದ ಪ್ರಯತ್ನವನ್ನು ಮಾಡಿ ಕದ್ರಿ ಸರ್ಕ್ಯೂಟ್ ಹೌಸ್ ಶಾಸಕರ ಕಛೇರಿಯಲ್ಲಿ ದಿ|| ರಾಜೇಶ್ ಅವರ ತಾಯಿಯಾದ ಸುಶೀಲಾ ಇವರಿಗೆ 5 ಲಕ್ಷ ಪರಿಹಾರಧನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬಿಕರ್ನಕಟ್ಟೆಯ ಕಾರ್ಪೋರೇಟರ್ ಶ್ರೀಮತಿ ಶಕಿಲಾ ಕಾವ, ಮಂಗಳೂರು ದಕ್ಷಿಣ ಮಂಡಲ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ರಘುವೀರ್ ಬಾಬುಗುಡ್ಡ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ದಿ|| ರಾಜೇಶ್ ಅವರ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ಪರಿಹಾರಧನ ಕೊಡಿಸಿರುವುದಕ್ಕೆ ಇವರಿಗೆ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪ ಸಮಾದೇಷ್ಟರಾದ ರಮೇಶ್, ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‍ಶೇರಾ, ಹಾಗೂ ದಿ|| ರಾಜೇಶ್ ಅವರ ಸಹೋದರಿ ಧನವಂತಿ, ಮತ್ತು ಮಂಗಳೂರು ಘಟಕದ ಸಾರ್ಜೆಂಟ್ ಸುನೀಲ್ ಕುಮಾರ್, ಗೃಹರಕ್ಷಕರಾದ ದಿವಾಕರ್, ಸತೀಶ್ ಕೆ.ಪಿ, ದುಷ್ಯಂತ್ ರೈ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق