ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಕ್ಕಮಗಳೂರು: ರಮಾಬಾಯಿ ಅಂಬೇಡ್ಕರ್ 125ನೇ ಜನ್ಮದಿನಾಚರಣೆ

ಚಿಕ್ಕಮಗಳೂರು: ರಮಾಬಾಯಿ ಅಂಬೇಡ್ಕರ್ 125ನೇ ಜನ್ಮದಿನಾಚರಣೆ


ಚಿಕ್ಕಮಗಳೂರು: ಜಗತ್ತಿನ ಯಾವ ನಾಯಕರಿಗೂ ಸಿಗದಂತಹ ತ್ಯಾಗಮಯಿ ಸತಿ. ಮಾತೆ ರಮಾಬಾಯಿಯವರು ಸಂಗಾತಿಯಾಗಿ ಅಂಬೇಡ್ಕರ್ ಅವರಿಗೆ ಸಿಕ್ಕಿದ್ದೆ ಒಂದು ರೀತಿಯಲ್ಲಿ ಭಾರತದೇಶಕ್ಕೆ ಸಂವಿಧಾನ ರಚಿಸಲು ಕಾರಣವಾಯಿತು ಎಂದು ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶೂದ್ರ ಶ್ರೀನಿವಾಸ್ ಹೇಳಿದರು.


ನಗರದ ಮಾರ್ಕೆಟ್ ರಸ್ತೆಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಕಛೇರಿಯಲ್ಲಿ ರಮಾಬಾಯಿ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.


ರಮಾಬಾಯಿ ಅವರ ಈ ತ್ಯಾಗÀದಿಂದಲೇ ನಮಗೆ ಪ್ರಬುದ್ಧ ಭಾರತಕ್ಕೆ ಅಂಬೇಡ್ಕರ್ ಸಿಕ್ಕಿದ್ದು. ಹಾಗಾಗಿಯೇ ರಮಾಬಾಯಿಯ ತ್ಯಾಗವೆ ಅಂಬೇಡ್ಕರ್ ರವರ ಶಕ್ತಿ. ಇಂದು ಈ ಮಾತೆಯ ಜನ್ಮದಿನ ಸದಾ ನೆನಪಿನಲ್ಲಿ ಉಳಿದು ಪ್ರತಿಯೊಬ್ಬರಿಗೂ ದಾರಿದೀಪವಾಗಲಿ ಎಂದರು.


ಪ್ರತಿ ಗಂಡಿನ ಯಶಸ್ಸಿನಲ್ಲಿ ಒಂದು ಹೆಣ್ಣಿನ ಪಾತ್ರ ಇರುತ್ತದೆ ಎನ್ನುವಂತೆಯೇ ರಮಾಬಾಯಿ ಅವರು ಅಂಬೇಡ್ಕರ್ ಅವರ ಪ್ರತಿ ಯಶಸ್ಸಿನ ಹಿಂದೆಯೂ ಇದ್ದರು. ಅಂಬೇಡ್ಕರ್ ಅವರ ಶಿಕ್ಷಣಕ್ಕೆ ಅವರ ತಂದೆ ಯವರು ಹೇಗೆ ಬೆಂಬಲ ನೀಡಿದರೋ ಹಾಗೆಯೇ ರಮಾಬಾಯಿ ಕೂಡ ಅಂಬೇಡ್ಕರ್ ಅವರ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದರು ಎಂದು ಹೇಳಿದರು.


ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ಡಾ|| ಬಿ.ಆರ್. ಅಂಬೇಡ್ಕರ್ ಅವರು ಇಂದು ದೊಡ್ಡಮಟ್ಟದಲ್ಲಿ ಬೆಳೆಯಲು ಪೂರ್ಣ ಸಹಕಾರ ನೀಡಿದವರು ರಮಾಬಾಯಿಯವರು. ಅವರ ಈ ಸಹಕಾರದಿಂದ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಪ್ರಪಂಚದಾದ್ಯಂತ ಪ್ರಸಿದ್ದವಾಗಿದೆ ಎಂದು ಹೇಳಿದರು.


ಅಂಬೇಡ್ಕರ್ ಶಿಕ್ಷಣ ಪಡೆಯುವ ದಿನಗಳಲ್ಲಿ ಸುಖ, ಸಂತೋಷ, ನೆಮ್ಮದಿ ಯಾವುದರ ಬಗ್ಗೆಯೂ ರಮಾಬಾಯಿ ಅವರು ತಲೆಕೆಡಿಸಿಕೊಳ್ಳದ ಸಮಯದಲ್ಲಿ, ಸಂಸಾರದ ನೋವು ಸ್ವಲ್ಪವೂ ತಿಳಿಯದಂತೆ ಕಾಪಾಡಿದ್ದು ರಮಾಬಾಯಿ ಎಂದು ಪತ್ನಿಯ ಬಗ್ಗೆ ಅಂಬೇಡ್ಕರ್ ಪತ್ರಿಕೆಯೊಂದರಲ್ಲಿ ಬರೆದಿರುತ್ತಾರೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು, ಜಿಲ್ಲಾ ಸಂಚಾಲಕ ರಮೇಶ್,  ಕಡೂರು ತಾಲ್ಲೂಕು ಸಂಚಾಲಕ ಗಂಗಾರಾಜು, ದಾಸರಹಳ್ಳಿ ಗ್ರಾ.ಪಂ. ಸದಸ್ಯ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಆರ್.ಶೇಖರ್, ಮುಖಂಡರುಗಳಾದ ಹನುಮಂತ, ಗಣೇಶ್, ಚಂದ್ರು ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم