ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬುರ್ಕಾ, ಹಿಜಾಬ್‌ನೊಳಗೆ ಮಹಿಳೆಯನ್ಬು ಬಂಧಿಸಿಡುವುದು ನಿಮ್ಮ ದೊಡ್ಡ ಸಾಧನೆಯೆ?: ಶಾಸಕ ಜಮೀರ್‌ಗೆ ಡಾ.ಭರತ್ ಶೆಟ್ಟಿ ವೈ ತಿರುಗೇಟು

ಬುರ್ಕಾ, ಹಿಜಾಬ್‌ನೊಳಗೆ ಮಹಿಳೆಯನ್ಬು ಬಂಧಿಸಿಡುವುದು ನಿಮ್ಮ ದೊಡ್ಡ ಸಾಧನೆಯೆ?: ಶಾಸಕ ಜಮೀರ್‌ಗೆ ಡಾ.ಭರತ್ ಶೆಟ್ಟಿ ವೈ ತಿರುಗೇಟು



ಸುರತ್ಕಲ್: ಹಿಜಾಬ್, ಬುರ್ಕಾ ಧರಿಸಿದ ಮಹಿಳೆ, ಮಕ್ಕಳ ಮೇಲೆ ಧಾರ್ಮಿಕ ಶಿಕ್ಷಣ ಕಲಿಸುವ ಮದ್ರಸಾಗಳಲ್ಲೇ ಲೈಂಗಿಕವಾಗಿ ಶೋಷಣೆ ಮಾಡುವ ಪ್ರಕರಣ ಹೆಚ್ಚಾಗುತ್ತಿದ್ದು, ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್ ಅವರು ಈ ಬಗ್ಗೆ ಶೋಷಿತರ ಪರವಾಗಿ ಹೋರಾಟ  ಮಾಡಿದ್ದಾರಾ ಎಂದು ಡಾ.ಭರತ್ ಶೆಟ್ಟಿ ವೈ ತಿರುಗೇಟು ನೀಡಿದ್ದಾರೆ‌.


ನಮ್ಮ ಬೋಗದ ವಸ್ತು,ನಮ್ಮ ಸ್ವತ್ತು ಎಲ್ಲಿ ಇತರರು ಅಪಹರಿಸುತ್ತಾರೋ ಏನೋ ಎಂದು ಅದೇ ಸಮುದಾಯದ ಬೆರಳೆಣಿಕೆಯಷ್ಟು ಮಂದಿ ದರ್ಪ ಮೆರೆದು ಮಹಿಳೆಯನ್ನು ತಲೆಯಿಂದ ಉಗುರಿನವೆರೆಗೆ ಬಟ್ಟೆಯಿಂದ ಸುತ್ತಿಡುವುದನ್ನು ನೋಡಿದರೆ ಅವರ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ. ಶೋಷಣೆ ತಪ್ಪಿಸಲು ತಲಾಖ್ ಪದ್ದತಿಗೆ ಕೇಂದ್ರ ಸರಕಾರ ರದ್ದು ಮಾಡಿದಾಗ ಇದೇ ಸಮಯದಾಯದ ಮುಖಂಡರು ವಿರೋಧ ವ್ಯಕ್ತ ಪಡಿಸಿದ್ದು ಯಾಕೆ?ಎಂದು ಪ್ರಶ್ನಿಸಿರುವ ಅವರು, ನಿಮ್ಮ ಸಮುದಾಯದ ಹೆಣ್ಮಕ್ಕಳ ಮೇಲೆ ಗೌರವ ಇಟ್ಟು, ಅವರಿಗೂ ಸ್ವತಂತ್ರವಾಗಿ ಚಿಂತಿಸಿ ಬಾಳುವ ಹಕ್ಕಿದೆ ಎಂಬುದನ್ನು ಅರ್ಥ ಮಾಡಿಕೊಂಡು ಮುಖ್ಯವಾಹಿನಿಗೆ ಬರಲು ಸಹಕರಿಸುವ ಬದಲು ಮತ್ತಷ್ಟು ಕ್ರೂರ ಪದ್ದತಿ ಸೃಷ್ಟಿಸಿ ಶೋಷಣೆ ಮಾಡುವುದನ್ನು ನೋಡಿಕೊಂಡಿರಲು ನಮ್ಮ ಸರಕಾರ ಕೈ ಕಟ್ಟಿ ಕೂತಿಲ್ಲ. ಸಂವಿಧಾನಿಕವಾಗಿ ಶಿಸ್ತು ಪಾಲಿಸಿ ಜೀವನ ನಡೆಸಲು ಎಲ್ಲರಿಗೂ  ಅವಕಾಶವಿದೆ. ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿರುವಾಗ ಶೋಷಣೆಗೆ ಕುಮ್ಮಕ್ಕು ನೀಡುವ ಹೇಳಿಕೆಯನ್ನು ಖಂಡಿಸುವುದಾಗಿ ಡಾ.ಭರತ್ ಶೆಟ್ಟಿ ತಿಳಿಸಿದ್ದಾರೆ.


ಮಾಜಿ ಸಚಿವ ಯು.ಟಿ ಖಾದರ್ ಅವರು ಕೂಡ ಸೌಹಾರ್ದತೆಯ ಮಂತ್ರ ಜಪಿಸುತ್ತಾ ಸಂವಿಧಾನಕ್ಕೆ ಬೆಲೆ ನೀಡದೆ ಶರಿಯತ್ ಸಂಪ್ರದಾಯವನ್ನು ಬೆಂಬಲಿಸಿ ಅಲ್ಪಸಂಖ್ಯಾತ ಮಹಿಳೆಯ ಶೋಷಣೆಗೆ ಬೆಂಬಲ ನೀಡುತ್ತಿದ್ದಾರೆ. ಇದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم