ಮಂಗಳೂರು: ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ, ಸಾಹಿತಿ ಸಮಾಜ ಸೇವಕಿ ಡಾ. ಮಾಲತಿ ಶೆಟ್ಟಿ ಮಾಣೂರುರವರಿಗೆ ಜನತಾ ಸಮಾಜ ಸೇವಾ ಟ್ರಸ್ಟ್ (ರಿ.) ಡಾ. ಶಿವಕುಮಾರ ಸ್ವಾಮೀಜಿಯವರ ಪುಣ್ಯ ಸ್ಮರಣಾರ್ಥ ಕಾರ್‍ಯಕ್ರಮದ ಅಂಗವಾಗಿ ನೀಡುವ ಸಿದ್ಧಗಂಗಾ ಶ್ರೀ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ನಯನಾ ಸಭಾಂಗಣದಲ್ಲಿ ಶ್ರೀ ಶ್ರೀ ಶ್ರೀ ಪರಮಪೂಜ್ಯ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿ ಬೇಲಿ ಮಹಾಸಂಸ್ಥಾನ ಬೆಂಗಳೂರು, ಡಾ. ಶ್ರೀ ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಮಹಾಸ್ವಾಮಿ ಕೋಡಿಮಠ ಗದಗ, ಪರಮಪೂಜ್ಯ ಪಲ್ಲಕ್ಕಿ ನಾರಾಯಣ ಸ್ವಾಮಿ ಶಿವಮೊಗ್ಗ ಆಶೀರ್ವಚನ ನೀಡಿ ಪ್ರಶಸ್ತಿ ಪ್ರದಾನ ಮಾಡಿದರು.
ಸಾಹಿತಿ, ವಾಗ್ಮಿ ಡಾ. ಕೆ.ಪಿ. ಪುತ್ತೂರಾಯ ಡಾ. ಜಿ.ಆರ್. ಹಿರೇಮಠ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ನಾಡೋಜ ಡಾ. ಮನು ಬಳಿಗಾರ್ ವಹಿಸಿದರು. ಹೆಚ್. ಸದಾಶಿವ ಸ್ವಾಗತಿಸಿದರು. ಶ್ರೀನಾಥ್‌ರವರು ಕಾರ್‍ಯಕ್ರಮ ನಿರೂಪಿಸಿ, ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق