ಮಂಡ್ಯ: ಮಂಡ್ಯದ ಅಡ್ವೈಸರ್ ಪತ್ರಿಕೆಯು `ಅಡ್ವೈಸರ್ ಸಾಹಿತ್ಯ ಪ್ರಶಸ್ತಿ- 15’ ಪ್ರಶಸ್ತಿಗಾಗಿ ಪುಸ್ತಕಗಳನ್ನು ಆಹ್ವಾನಿಸಿದೆ. ರಜತ ಸಂಭ್ರಮದಲ್ಲಿರುವ ಅಡ್ವೈಸರ್ ಪತ್ರಿಕೆಯು ಪ್ರತಿ ವರ್ಷದಂತೆ 2021ನೇ ಸಾಲಿನ ಪ್ರಶಸ್ತಿಗಾಗಿ ರಾಜ್ಯಮಟ್ಟದ 15ನೇ ವರ್ಷದ ‘ಅಡ್ವೈಸರ್ ಸಾಹಿತ್ಯ ಪ್ರಶಸ್ತಿ’ ಗಾಗಿ ಎಂಟು ವಿಭಾಗಗಳಲ್ಲಿ 10 ಪ್ರಶಸ್ತಿಗಳನ್ನು ನೀಡುತ್ತಿದೆ.
ಕವನ ಸಂಕಲನ, ಕಥಾ ಸಂಕಲನ, ಚುಟುಕು ಸಂಕಲನ, ವಚನ ಸಾಹಿತ್ಯ, ಮಹಿಳಾ ಸಾಹಿತ್ಯ, ಪುಸ್ತಕ ಪ್ರಶಸ್ತಿ, ಮಕ್ಕಳ ಸಾಹಿತ್ಯ, ಆಧ್ಯಾತ್ಮಿಕ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಬಹುದು.
ಪ್ರಶಸ್ತಿಯ ವಿವರಗಳು: ಎಲ್ಲಾ ಹತ್ತು ಪ್ರಶಸ್ತಿಗಳು ಸಮನಾಗಿ ನಗದು ಮೂರು ಸಾವಿರ ರೂಪಾಯಿ ಮತ್ತು ಅಭಿನಂದನಾ ಪತ್ರವನ್ನು ಹೊಂದಿರುತ್ತದೆ. ಕವನ ಸಂಕಲನಕ್ಕೆ ಇರುವ ಎರಡು ಪ್ರಶಸ್ತಿಗಳಲ್ಲಿ ಒಂದು ಮಹಿಳಾ ಕವಯತ್ರಿಗೆ ಮೀಸಲಿದೆ. ವಚನ ಸಾಹಿತ್ಯ ಪ್ರಶಸ್ತಿಗೆ ಸಂಬಂಧಿಸಿದಂತೆ ವಚನ ಸಾಹಿತ್ಯಕ್ಕೆ ಸಂಬಂಧ ಪಟ್ಟ ಎಲ್ಲ ಪ್ರಕಾರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಮಹಿಳಾ ಪ್ರಶಸ್ತಿಗೆ ಸಂಬಂಧಪಟ್ಟಂತೆ ಮಹಿಳೆಯರು ರಚಿಸಿರುವ ಯಾವುದೇ ಪ್ರಕಾರಗಳಿಗೂ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ. ಪುಸ್ತಕ ಪ್ರಶಸ್ತಿಗಾಗಿ, ಪುಸ್ತಕದ ಯಾವುದೇ ಪ್ರಕಾರವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು (ಪುಸ್ತಕ ಅಂದ ಚಂದ ಮತ್ತು ಪುಸ್ತಕದ ಮೌಲ್ಯವನ್ನು ಗಮನದಲ್ಲಿರುತ್ತದೆ).
ಮಕ್ಕಳ ಸಾಹಿತ್ಯಕ್ಕೆ, ಮಕ್ಕಳಿಗಾಗಿ ರಚಿಸಿರುವ ಯಾವುದೇ ಪ್ರಕಾರಗಳಿಗೂ ಹಾಗೂ ಆಧ್ಯಾತ್ಮಿಕ ಪ್ರಶಸ್ತಿಗೆ ಧರ್ಮ, ಪುರಾಣಗಳಿಗೆ ಸಂಬಂಧಪಟ್ಟಂತೆ ಯಾವುದೇ ಪ್ರಕಾರಗಳಿಗೂ ಸ್ಪರ್ಧೆಗೆ ಅವಕಾಶವಿದೆ. ಲೇಖಕರು 2021 ರಲ್ಲಿ ಪ್ರಕಟಗೊಂಡ ತಮ್ಮ ಕೃತಿಯ ಮೂರು ಪ್ರತಿಯನ್ನು ಸ್ವಪರಿಚಯ, ಮೊಬೈಲ್ ಸಂಖ್ಯೆಗಳನ್ನು ಈ ಕೆಳಕಂಡ ವಿಳಾಸಕ್ಕೆ 30 ಮಾರ್ಚ್ 2022ರ ಒಳಗೆ ತಲುಪುವಂತೆ ಕಳುಹಿಸಲು ಕೋರಲಾಗಿದೆ. ಪ್ರತಿ ವಿಭಾಗವು ಪ್ರತ್ಯೇಕವಾಗಿದ್ದು, ಸ್ಪರ್ಧಿಸುತ್ತಿರುವ ವಿಭಾಗದ ಹೆಸರನ್ನು ಸ್ಪಷ್ಟವಾಗಿ ಬರೆದಿರಬೇಕು.
ಹೆಚ್ಚಿನ ಮಾಹಿತಿಗಾಗಿ: ಸಿ. ಬಸವರಾಜು, ಸಂಪಾದಕರು, ಅಡ್ವೈಸರ್ ಮಾಸ ಪತ್ರಿಕೆ, # 1455 , ಚಂದ್ರಗಿರಿ, ಡಾ. ರಾಜ್ ಕುಮಾರ್ ಬಡಾವಣೆ, ಮಂಡ್ಯ- 571402 78926 88670
إرسال تعليق