ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಕ್ಕಮಗಳೂರು: ಜನಸ್ನೇಹಿ ಕೇಂದ್ರದ ಆಪರೇಟರ್‌ಗಳಿಗೆ ಸೇವಾ ಭದ್ರತೆಗೆ ಒತ್ತಾಯ

ಚಿಕ್ಕಮಗಳೂರು: ಜನಸ್ನೇಹಿ ಕೇಂದ್ರದ ಆಪರೇಟರ್‌ಗಳಿಗೆ ಸೇವಾ ಭದ್ರತೆಗೆ ಒತ್ತಾಯ


ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಪರೇಟರ್‌ಗಳನ್ನು ಕರ್ತವ್ಯದಲ್ಲಿ ಮುಂದುವರೆಸಿ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಮಟ್ಟದ ನಾಡಕಛೇರಿ ಆಪರೇಟರ್‌ಗಳು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಸುಮಾರು ಹತ್ತು ವರ್ಷಗಳಿಂದ ರಾಜ್ಯಾದ್ಯಂತ ನಾಡಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಯಾವುದೇ ಸೇವಾ ಭದ್ರತೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2006ರ ನೆಮ್ಮದಿ ಯೋಜನೆಯಿಂದ ಈಗಿನ ಆಟಲ್ ಜೀ ಯೋಜನೆವರೆಗೂ ಸತತ 14 ವರ್ಷಗಳ ಕಾಲ ಕಂದಾಯ ಇಲಾಖೆಯ ಆಟಲ್ ಜೀ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವುದಾಗಿ ಹೇಳಿದರು.

ಸರ್ಕಾರದ ವಿವಿಧ ಯೋಜನೆಗಳ ಹೊಸ ಹೊಸ ಸೇವೆಗಳನ್ನು ಜನರ ಜೀವನಾಡಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದು ಈ ಆಪರೇಟರ್‌ಗಳ ಪರಿಶ್ರಮದ ಕೆಲಸದಿಂದಾಗಿ ರಾಷ್ಟ್ರಮಟ್ಟದಲ್ಲಿ ರಾಜ್ಯದ ಪರವಾಗಿ ಆಯುಕ್ತರು ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಜನಪರ ಸೇವೆಗಳನ್ನು ನೀಡುತ್ತಾ ಬಂದಿರುವ ನೆಮ್ಮದಿ, ಆಟಲ್ ಜೀ ಜನಸ್ನೇಹಿ ಕೇಂದ್ರದ ಆಪರೇಟರ್‌ಗಳು ಅಲ್ಪ ಮೊತ್ತದ ವೇತನವನ್ನು ಪಡೆದು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದು ರಾಜ್ಯದಲ್ಲಿ ಸುಮಾರು 1222 ಆಪರೇಟರ್‍ಗಳು ಇದನ್ನೇ ನಂಬಿ ಜೀವನ ನಡೆಸುತ್ತಿದ್ದು ವಯೋಮಿತಿ ಮೀರಿ ಜೀವನ ದುಸ್ತರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಸ್ತುತ ಸರ್ಕಾರದಿಂದ ಸಾರ್ವಜನಿಕರಿಗೆ ಪ್ರಾರಂಭಿಸಿರುವ ಯೋಜನೆಗಳು ಭವಿಷ್ಯದ ದೃಷ್ಟಿಯಿಂದ ಆಪರೇಟರ್‍ಗಳಿಗೆ ತೊಂದರೆಯಾಗದಂತೆ ಜನಮೆಚ್ಚುಗೆ ಪಾತ್ರರಾಗಿರುವ ಆಟಲ್ ಜೀ ಸೇವೆಗಳು ಯಾವುದೇ ರೀತಿಯಿಂದ ಸ್ಥಗಿತಗೊಳ್ಳದಂತೆ ಅನುಷ್ಟಾನಗೊಳಿಸಬೇಕು ಎಂದು ಆಗ್ರಹಿಸಿದರು.

ಸಾವಿರಾರು ಆಪರೇಟರ್‍ಗಳÀ ಕುಟುಂಬಗಳು ಬೀದಿಪಾಲಾಗದಂತೆ ಕರ್ತವ್ಯದಲ್ಲಿ ಮುಂದುವರೆಸಿ ಜೊತೆಗೆ ಸೇವಾ ಭದ್ರತೆಯನ್ನು ನೀಡಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ನಾಡ ಕಛೇರಿಗಳ ಆಪರೇಟರ್‍ಗಳಾದ ಕಿರಣ್, ಅರುಣ್, ತಿಪ್ಪೇಶ್, ಸತೀಶ್, ಸೋಮಶೇಖರ್, ಶ್ರೀಲತಾ, ಬಬಿತಾ, ವೀಣಾ, ಆಶಾ, ಸುಮಯಾ ಬೇಗಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم