ರಾಯಚೂರಿನಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಪ್ರಕರಣ ಪ್ರತಿಭಟಿಸಿ ಚಿಕ್ಕಮಗಳೂರು ಬಂದ್ ನಡೆಸಲಾಗಿತ್ತು
ಚಿಕ್ಕಮಗಳೂರು: ಡಾ|| ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ರಾಯಚೂರಿನ ನ್ಯಾಯಾಧೀಶರ ವಿರುದ್ಧ ಫೆ.1 ರಂದು ತಾಲ್ಲೂಕಿನಲ್ಲಿ ನಗರ ಬಂದ್‍ಗೆ ಬೆಂಬಲಿಸಿದ ಅಪಾರ ಸಂಖ್ಯೆಯ ದಲಿತರಪರ ಸಂಘಟನೆಗಳು ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಪ್ರತಿಭಟನೆ ನೇತೃತ್ವ ವಹಿಸಿದ್ದ ದಲಿತ ಮುಖಂಡ ಹೊನ್ನೇಶ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂಬಂಧ ಬುಧವಾರ ಹೇಳಿಕೆ ನೀಡಿರುವ ಅವರು ನಗರ ಬಂದ್ ಸಂದರ್ಭದಲ್ಲಿ ಜಾತಿ ರಹಿತ ವಾಗಿ ಬೆಂಬಲಿಸಿರುವ ಎಲ್ಲಾ ರಾಜಕೀಯ ಮುಖಂಡರು, ಕನ್ನಡಪರ ಸಂಘಟನೆಗಳು, ಮುಸ್ಲಿಂ ಸಮಾಜದ ಮುಖಂಡರಿಗೂ ಹಾಗೂ ಸ್ವಯಂ ಪ್ರೇರಿತರಾಗಿ ಬೆಂಬಲಿಸಿದ ಹೋಟೆಲ್ ಮಾಲೀಕರು, ಅಂಗಡಿ ವರ್ತಕರು, ಆಟೋ ಸಂಘದವರು ಮತ್ತು ನಗರದ ಎಲ್ಲಾ ನಾಗರೀಕರಿಗೂ ಕೃತಜ್ಞತೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق