ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಷ್ಟ್ರೀಯ ಯೋಗ ಸಾಧಕಿ ಉಡುಪಿಯ ಈ ಪುಟಾಣಿ ಸನ್ನಿಧಿ

ರಾಷ್ಟ್ರೀಯ ಯೋಗ ಸಾಧಕಿ ಉಡುಪಿಯ ಈ ಪುಟಾಣಿ ಸನ್ನಿಧಿ


ಉಡುಪಿ: ಇತ್ತೀಚೆಗೆ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ನಡೆದ 6ನೇ ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್ ಶಿಪ್‌ನಲ್ಲಿ 7 ವರ್ಷಕ್ಕಿಂತ ಕಿರಿಯರ ವಿಭಾಗದಲ್ಲಿ ಉಡುಪಿಯ ಸನ್ನಿಧಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.


ಎರ್ಮಾಳ್ ವಿದ್ಯಾ ಪ್ರಬೋಧಿನಿ ಶಾಲೆಯಲ್ಲಿ 1 ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ, ಉಡುಪಿ ಗರ್ಡೆ ಲಕ್ಷ್ಮಿ ನಗರದ ಶಾರದಾ ಮತ್ತು ರವೀಂದ್ರ ಶೆಟ್ಟಿಗಾರ್ ದಂಪತಿಯ ಪುತ್ರಿ. ತಮ್ಮ 6 ನೇ ವಯಸ್ಸಿನಲ್ಲಿ ಈ ರಾಷ್ಟ್ರಮಟ್ಟದ ಸಾಧನೆ ಮಾಡಿದ್ದಾಳೆ.


ಅಂಡಮಾನ್ ನಿಕೋಬಾರ್ ದ್ವೀಪಗಳ ಯೋಗ ಸ್ಪೋರ್ಟ್ಸ್‌ ಅಸೋಸಿಯೇಶನ್‌, ಯೋಗ ಕಲ್ಚರಲ್‌ ಸೊಸೈಟಿ ಮತ್ತು ಇಂಟರ್‌ನ್ಯಾಷನಲ್‌ ಯೂತ್ ಯೋಗ ಫೆಡರೇಶನ್‌ - ಈ ಸಂಘಟನೆಗಳು ಪೋರ್ಟ್‌ಬ್ಲೇರ್‌ನ ಸರಕಾರಿ ಆಯುಷ್ ಇಲಾಖೆ ಮತ್ತು ಸರಕಾರಿ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಈ ಸ್ಪರ್ಧೆಯನ್ನು  ಜನವರಿ 16ರಂದು ಆಯೋಜಿಸಿದ್ದವು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم