ಮೈಸೂರು: ಸಹಕಾರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಈಗಾಗಲೇ ಕ್ರಮಕೈಗೊಂಡಿದ್ದು, 3 ಸಾವಿರ ಹುದ್ದೆಗಳ ಭರ್ತಿಗೆ ಗೆ ನೋಟಿಫಿಕೇಷನ್ ಹೊರಡಿಸಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಅವರು ಶುಕ್ರವಾರ ಮೈಸೂರು ಡಿಸಿಸಿ ಬ್ಯಾಂಕ್ ಶಾಖೆಯ ಕಟ್ಟಡ ನಿರ್ಮಾಣ ಹಾಗೂ ನಂದಿನಿ ಮಿಲ್ಕ್ ಗ್ಯಾಲಕ್ಸಿ ಮತ್ತು ನಂದಿನಿ ಕೆಫೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡುತ್ತಾ ಈ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ದೇಶ-ವಿದೇಶಗಳ ನಾನಾ ಭಾಗಗಳಿಗೆ ನಂದಿನಿ ತುಪ್ಪ ರವಾನೆಯಾಗುತ್ತಿದ್ದು, ಇದಲ್ಲದೇ ನಂದಿನಿ ಹಾಲು ಕೂಡ ಅನ್ಯ ರಾಜ್ಯಗಳಿಗೆ ಹೋಗುತ್ತದೆ.
ಹೀಗಾಗಿ ನಂದಿನಿ ಬ್ರ್ಯಾಂಡ್ಗೆ ಕಳಂಕ ತರುವವರನ್ನು ಹಾಗೂ ನಂದಿನಿ ಪದಾರ್ಥಗಳನ್ನು ನಕಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು.
إرسال تعليق