ಅಯ್ಯೋ ಡಿಕೆಶಿ ಸಾಹೇಬ್ರೇ, ಹಿಜಬ್ ವಿಚಾರದಲ್ಲಿ ಅದೇನ್ ಹೇಳ್ಬೇಕೊ ಸ್ಪಷ್ಟವಾಗಿ ಹೇಳ್ರೀ. ಅಡ್ಡಗೋಡೆ ಮೇಲೆ ದೀಪ ಇಟ್ಹಾಗ್ ಮಾತಾಡ್ಬೇಡಿ.
ಅಲ್ಲಾರೀ ..ಹಿಜಬ್ ವಿವಾದದಿಂದ ದೇಶಕ್ಕೇ ಅವಮಾನ ಆಗಿದೆ ಅಂತೀರಿ... ಯಾರಿಂದ ಅಂತ ಸ್ಪಷ್ಟವಾಗಿ ಹೇಳಿ.
ನೀವ್ ಹೇಳ್ತೀರಿ ಸಂವಿಧಾನಬದ್ಧವಾಗಿ ಎಲ್ರಿಗೂ ಅವಕಾಶ ಬೇಕು ಸಂವಿಧಾನವೇ ಮುಖ್ಯ ಅಂತ...
ಆದ್ರೆ..." ನಮ್ಗೆ ಈ ದೇಶದ ಸಂವಿಧಾನ ಕಾನೂನು ಯಾವುದೂ ಲೆಕ್ಕಕ್ಕಿಲ್ಲ ನಮ್ಗೆ ನಮ್ ಧರ್ಮಾನೇ ಮುಖ್ಯ" ಅಂತ ಹಿಜಬ್ ಹಾಕ್ಕೊಂಡವ್ರು ಹೇಳ್ತಾ ಇದ್ದಾರಲ್ವಾ? ಇದಕ್ಕೇನಂತೀರಿ.
ಸಂವಿಧಾನ ಮುಖ್ಯ ಅಂತ ನೀವ್ ಹೇಳೋದೇ ಸರಿ ಆದ್ರೆ ಸಂವಿಧಾನ ಬದ್ಧ ಸರ್ಕಾರ ಹೇಳೋದೇ ಸರಿ ಅಂತ ತಾನೇ ನಿಮ್ ಮಾತಿನ ಅರ್ಥ?! ಹಾಗಾದ್ರೆ ಅದನ್ನ ಹಿಜಬ್ ಬೇಕು ಅನ್ನೋರಿಗೂ ಸರಿಯಾಗಿ ಹೇಳೋಕಾಗಲ್ವೇ ನಿಮ್ಗೆ?
ಒಂದ್ ನೆನಪಿಡಿ ಡಿಕೆಶಿ ಸಾಹೇಬ್ರೇ, ಇವತ್ತು ನಿಮ್ ಸರಕಾರ ಇಲ್ದೇ ಇರ್ಬೋದು....ಆದ್ರೆ ಮುಂದೊಂದು ದಿನ ನಿಮ್ದೇ ಸರ್ಕಾರ ಬರ್ಬೋದು ಅಂತಾನೇ ಇಟ್ಕೊಳ್ಳಿ. ಆಗ ನಿಮ್ಮನ್ನೂ ಯಾಮಾರಿಸಿಬಿಡೋ ಮಟ್ಟಕ್ಕೆ ಬೆಳೆದಿದ್ದಾರೆ ಈ ಮತಾಂಧರು... ನೆನಪಿರ್ಲಿ.
.ಇಡೀ ಭಾರತವನ್ನು ಜಿಹಾದಿ ವಶ ಮಾಡೋ ಹುನ್ನಾರ ಇದು ಅನ್ನೊ ಕಟು ಸತ್ಯ... ಎಷ್ಟು ಬೇಗ ನಿಮ್ಗೆ ಅರ್ಥ ಆಗುತ್ತೋ ಅಷ್ಟು ಈ ದೇಶಕ್ಕೆ ಒಳ್ಳೇದು ಅಷ್ಟೆ.
ನಾವು ನೀವು ಯಾರೂ ಶಾಶ್ವತ ಅಲ್ಲ ಡಿಕೆಶಿಯವ್ರೇ. ಆದ್ರೆ ಈ ದೇಶ ಈ ಸನಾತನ ಸಂಸ್ಕೃತಿ ಸದ್ವಿಚಾರಗಳು ವಿಶ್ವಕ್ಕೇ ಒಳಿತಾಗಲಿ ಅನ್ನೊಕ ಉದಾರ ಸಂದೇಶಗಳು ಭಾರತದಿಂದ ಮಾತ್ರ ಜಗತ್ತಲ್ಲಿ ನಿರೀಕ್ಷಿಸಕ್ಕೆ ಸಾಧ್ಯ.
ಆದ್ರೆ ..ಮನೆಗೆ ಬೆಂಕಿ ಬೀಳೋ ಹೊತ್ತಿಗೂ ಭಜನೆ ಮಾಡಿ ಅಂತ ನಮ್ಮ ಧರ್ಮಗ್ರಂಥಗಳು, ರಾಮ- ಕೃಷ್ಣ ಮೊದಲಾದ ನಾವು ನೀವು ಪೂಜಿಸೋ ದೈವೀಶಕ್ತಿಗಳೂ ಹೇಳಿಲ್ಲ. ಇದು ಗೊತ್ತಿರ್ಲಿ.
-ಜಿ ವಾಸುದೇವ ಭಟ್ ಪೆರಂಪಳ್ಳಿ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق