ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಸೆಮಣೆ ಏರಿದ ನಟಿ ಕರೀಷ್ಮಾ ತನ್ನಾ

ಹಸೆಮಣೆ ಏರಿದ ನಟಿ ಕರೀಷ್ಮಾ ತನ್ನಾ



ಬೆಂಗಳೂರು;  ನಟಿ ಕರೀಷ್ಮಾ ತನ್ನಾ ಅವರು ಪ್ರಿಯಕರ ವರುಣ್ ಬಂಗೇರಾ ಜೊತೆಗೆ ನಿನ್ನೆ ಹಸೆಮಣೆ ಏರಿದ್ದಾರೆ. ನಿನ್ನೆ ಸಂಜೆ ವೇಳೆಗೆ ಕರೀಷ್ಮಾ ಹಾಗೂ ವರುಣ್ ಮದುವೆ ನೆರವೇರಿದೆ. ವರುಣ್ ಅವರು ಕರೀಷ್ಮಾ ಹಣೆಗೆ ಕುಂಕುಮ ಇಡುತ್ತಿರುವ ಫೋಟೋ ವೈರಲ್ ಆಗಿದೆ.

ಗುರುವಾರದಿಂದಲೇ ಕರೀಷ್ಮಾ ಹಾಗೂ ವರುಣ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು.

ಈ ಬಗ್ಗೆ ಕರೀಷ್ಮಾ ಅಪ್‍ಡೇಟ್ ನೀಡುತ್ತಲೇ ಇದ್ದರು. ಗುರುವಾರ ಹಳದಿ ಕಾರ್ಯಕ್ರಮ, ಆ ಬಳಿಕ ಮೆಹಂದಿ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನಡೆದಿತ್ತು. 

ಕೆಲವು ವರ್ಷಗಳ ಹಿಂದೆ ಪಾರ್ಟಿ ಒಂದರಲ್ಲಿ ವರುಣ್ ಹಾಗೂ ಕರೀಷ್ಮಾ ಭೇಟಿ ಆಗಿದ್ದರು. ಆ ಬಳಿಕ ಇವರ ನಡುವೆ ಫ್ರೆಂಡ್‍ಶಿಪ್ ಬೆಳೆದಿತ್ತು. ಅದು ಪ್ರೀತಿಗೆ ತಿರುಗಿ ಈ ಜೋಡಿ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.  ಇದೀಗ ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

0 تعليقات

إرسال تعليق

Post a Comment (0)

أحدث أقدم