ರಾಯಚೂರು: ಚಲಿಸುತ್ತಿದ್ದ ಆಟೋ ಟೈಯರ್ ಸ್ಫೋಟಗೊಂಡು ಆಟೋ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ಕು ಜನರು ಗಾಯಗೊಂಡ ಘಟನೆಯೊಂದು ಆಂಧ್ರದ ಮಹಾದ್ವಾರಂ ಮಂಡಲದ ಹತ್ತಿರ ನಡೆದಿದೆ.
ರಾಯಚೂರು ಜಿಲ್ಲೆಯ ಗಡಿ ಭಾಗದ ಆಂಧ್ರದ ಮಹಾದ್ವಾರಂ ಹತ್ತಿರ ಭಾನುವಾರ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ.
ದೊಡ್ಡಬಳ್ಳಾಪುರದಿಂದ ಐದು ಜನ ಸ್ನೇಹಿತರು ಬೆಂಗಳೂರಿನಿಂದ ರೈಲು ಮೂಲಕ ಬೆಳಗ್ಗಿನ ಜಾವ ಮಂತ್ರಾಲಯಂ ರೈಲ್ವೆ ನಿಲ್ದಾಣಕ್ಕೆ ತಲುಪಿದ್ದಾರೆ.
ರೈಲ್ವೆ ನಿಲ್ದಾಣದಿಂದ ಆಟೋ ಮೂಲಕ ಮಂತ್ರಾಲಯಕ್ಕೆ ಪ್ರಯಾಣಿಸಿದ್ದು, ಆದರೆ ಮಹಾದ್ವಾರಂ ಸಮೀಪ ಆಟೋ ಟೈಯರ್ ಬ್ಲಾಸ್ಟ್ ಆದ ಕಾರಣ ಆಟೋ ಪಲ್ಟಿಯಾಗಿದೆ.
ಪರಿಣಾಮ, ಆಟೋ ಚಾಲಕ ಹಾಗೂ ರಾಘವೇಂದ್ರ ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೂ ಉಳಿದವರು ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಮಹಾದ್ವಾರಂ ಪೊಲೀಸರು ಸ್ಥಳಕ್ಕೆ ಭೇಟಿ ನಿಡಿ ಪರಿಶೀಲಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
إرسال تعليق