ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಸ್ಪತ್ರೆ ದಾಖಲಾದ 2 ವರ್ಷದ ಮಗು ರಕ್ತಸ್ರಾವ ದಿಂದ ಮೃತ್ಯು

ಆಸ್ಪತ್ರೆ ದಾಖಲಾದ 2 ವರ್ಷದ ಮಗು ರಕ್ತಸ್ರಾವ ದಿಂದ ಮೃತ್ಯು

 


ಹುಬ್ಬಳ್ಳಿ:  ಸಂಜಯ್ ಹಾಗೂ ಕೀರ್ತಿ ದಂಪತಿಯ ಮಗು ರಕ್ಷಾ ಚೌಧರಿ (2ವರ್ಷ) ಮೃತ ದುರ್ದೈವಿ.


ಬಾಯಿಯೊಳಗೆ ಗಡ್ಡೆಯಾದ ಕಾರಣ ರಕ್ಷಾಳನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.


ಪೋಷಕರ ಅನುಮತಿ ಪಡೆಯದೇ ವೈದ್ಯರು ಆಪರೇಷನ್​ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಾಗುವಾಗ ಆರೋಗ್ಯವಾಗಿದ್ದ ಮಗುವಿಗೆ  ಸರ್ಜರಿ ಬಳಿಕ ರಕ್ತ ಸ್ರಾವ ಆರಂಭವಾಗಿತ್ತು.


 ತೀವ್ರ ರಕ್ತ ಸ್ರಾವ ನಿಲ್ಲದ ಕಾರಣ ಕಿಮ್ಸ್​ ವೈದ್ಯರು ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿಯೂ ರಕ್ತಸ್ರಾವ ನಿಲ್ಲದ ಕಾರಣ ಮತ್ತೆ ಕಿಮ್ಸ್​​ಗೆ ಕರೆತರಲಾಗಿತ್ತು. ಬಳಿಕ ತೀವ್ರ ರಕ್ತಸ್ರಾವದಿಂದ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.


ಪುಟ್ಟ ಮಗುವನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದು, ಕಿಮ್ಸ್​ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


0 Comments

Post a Comment

Post a Comment (0)

Previous Post Next Post