ಹುಬ್ಬಳ್ಳಿ: ಸಂಜಯ್ ಹಾಗೂ ಕೀರ್ತಿ ದಂಪತಿಯ ಮಗು ರಕ್ಷಾ ಚೌಧರಿ (2ವರ್ಷ) ಮೃತ ದುರ್ದೈವಿ.
ಬಾಯಿಯೊಳಗೆ ಗಡ್ಡೆಯಾದ ಕಾರಣ ರಕ್ಷಾಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಪೋಷಕರ ಅನುಮತಿ ಪಡೆಯದೇ ವೈದ್ಯರು ಆಪರೇಷನ್ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಾಗುವಾಗ ಆರೋಗ್ಯವಾಗಿದ್ದ ಮಗುವಿಗೆ ಸರ್ಜರಿ ಬಳಿಕ ರಕ್ತ ಸ್ರಾವ ಆರಂಭವಾಗಿತ್ತು.
ತೀವ್ರ ರಕ್ತ ಸ್ರಾವ ನಿಲ್ಲದ ಕಾರಣ ಕಿಮ್ಸ್ ವೈದ್ಯರು ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿಯೂ ರಕ್ತಸ್ರಾವ ನಿಲ್ಲದ ಕಾರಣ ಮತ್ತೆ ಕಿಮ್ಸ್ಗೆ ಕರೆತರಲಾಗಿತ್ತು. ಬಳಿಕ ತೀವ್ರ ರಕ್ತಸ್ರಾವದಿಂದ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.
ಪುಟ್ಟ ಮಗುವನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದು, ಕಿಮ್ಸ್ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
إرسال تعليق