ಬಂಟ್ವಾಳ :ಡೆತ್ ನೋಟ್ ಬರೆದಿಟ್ಟು ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂದಿ ಬಂಟ್ವಾಳ ನೇತ್ರಾವತಿ ಸೇತುವೆಯ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ನಡೆದಿದ್ದು ಸ್ಥಳೀಯರು ಅವರನ್ನು ಸೇತುವೆಯ ಬಳಿ ಕಂಡು ತಡೆದು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ರಾಜೇಶ್ ಎಂಬವರು ಆತ್ಮಹತ್ಯೆಗೆ ಯತ್ನಿಸಿದವರು.
ಇಂದು ಬೆಳಗ್ಗೆ ರಾಜೇಶ್ ಕೆಲವರಿಗೆ ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದು ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದು ಇದರಿಂದ ಮಾನಸಿಕವಾಗಿ ಮನನೊಂದಿದ್ದೇನೆ. ಆದುದರಿಂದ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಸಂದೇಶ ಕಳುಹಿಸಿದ್ದರು.
ನಂತರ ಡೆತ್ ನೋಟು ಬರೆದಿದ್ದು ಅದರಲ್ಲಿಯೂ ಕೂಡಾ ಇದೇ ವಿಷಯವನ್ನು ಉಲ್ಲೇಖಿಸಲಾಗಿದೆ.
إرسال تعليق