ಮಂಗಳೂರು: ಕಾರು ಚಾಲಕನೊಬ್ಬ ಆಂಬ್ಯುಲೆನ್ಸ್ಗೆ ದಾರಿ ಬಿಡದೆ ಪುಂಡಾಟಿಕೆ ನಡೆಸಿದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.
ಭಟ್ಕಳಕ್ಕೆ ರೋಗಿ ಕರೆದುಕೊಂಡು ಹೊರಟಿದ್ದ ಆಂಬ್ಯುಲೆನ್ಸ್ಗೆ ಮುಲ್ಕಿಯಲ್ಲಿ ಕಾರು ಎದುರಾಗಿದ್ದು, ಎಷ್ಟೇ ಸೈರನ್ ಹಾಕಿದರೂ ಕೂಡ ಕಾರು ಚಾಲಕ ದಾರಿ ಬಿಡದೆ ಸತಾಯಿಸಿದ್ದಾನೆ.
ಇದೇ ರೀತಿ ಸುಮಾರು 40 ಕಿಲೋಮೀಟರ್ ಅಂದರೆ ಉಡುಪಿ ವರೆಗೆ ದಾರಿ ಬಿಡದೆ ಕಾರು ಚಾಲಕ ಉದ್ಧಟತನ ಮೆರೆದಿದ್ದಾನೆ.
KA19MD6843 ನಂಬರ್ ಪ್ಲೇಟ್ ಹಾಕಿದ್ದ ಕಾರು ಮತ್ತೆ ರಾತ್ರಿಯೂ ಕೂಡ ಮತ್ತೊಂದು ಆಂಬ್ಯುಲೆನ್ಸ್ಗೆ ದಾರಿ ಬಿಡದೆ ಇದೇ ರೀತಿ ಪುಂಡಾಟಿಕೆ ಮೆರೆದಿದ್ದಾನೆ ಎನ್ನಲಾಗಿದೆ.
إرسال تعليق