ಸುಳ್ಯ: ಟೋಯಿಂಗ್ ವಾಹನ ಹಾಗೂ ಸ್ವಿಫ್ಟ್ ಕಾರಿನ ನಡುವೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆಯೊಂದು ಕನಕಮಜಲು ಎಂಬಲ್ಲಿ ನಡೆದಿದೆ.
ಅಪಘಾತದ ಕಾರನ್ನು ಮಂಗಳೂರಿನಿಂದ ಮೈಸೂರಿಗೆ ಒಯ್ಯುತ್ತಿದ್ದ ಟೋಯಿಂಗ್ ವಾಹನವು ಕೋಡಿ ತಿರುವಿಗೆ ತಲುಪುತ್ತಿದ್ದಂತೆಯೇ ವಾಹನದ ಬ್ರೇಕ್ ವೈಫಲ್ಯಗೊಂಡು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಗಾಯಳುಗಳನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
إرسال تعليق