ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ; 14 ಎಮ್ಮೆ ಸಾವು

ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ; 14 ಎಮ್ಮೆ ಸಾವು

 


ಕಮಲನಗರ: ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ 14 ಎಮ್ಮೆಗಳು ಮೃತಪಟ್ಟ ಘಟನೆಯೊಂದು ಪಟ್ಟಣದ ರೈಲು ನಿಲ್ದಾಣದ ಹತ್ತಿರ ಬುಧವಾರ ಮಧ್ಯಾಹ್ನ ನಡೆದಿದೆ.

ನಾಂದೇಡ್-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿದ್ದ ವೇಳೆ ಎಮ್ಮೆಗಳು ಅಡ್ಡ ಬಂದಿವೆ ಎನ್ನುಲಾಗುತ್ತಿವೆ.

ಸಂಜೆ 6 ಗಂಟೆಯಾದರೂ ಜಾನುವಾರುಗಳ ಮಾಲೀಕರು ಯಾರು, ಎಲ್ಲಿಂದ ಬಂದಿವೆ ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸುದ್ದಿ ತಿಳಿಯುತ್ತಿದ್ದಂತೆ ಬೀದರ್ ರೈಲ್ವೆ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಭಾಲ್ಕಿ ರೈಲ್ವೆ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಎಮ್ಮೆಗಳ ಹಿಂಡು ಮದನೂರು ರಸ್ತೆ ಪಕ್ಕದ ಕೆರೆಯಲ್ಲಿ ನೀರು ಕುಡಿದು ಬರುವಾಗ ಹಳಿ ದಾಟುವ ವೇಳೆ ಈ ಅಪಘಾತ ನಡೆದಿರಬಹುದು ಎಂದು ಸ್ಥಳೀಯರು ತಿಳಿಸಿದರು.


0 تعليقات

إرسال تعليق

Post a Comment (0)

أحدث أقدم