ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರು ಅಪಘಾತ: ಸಂಸದ ಉಮೇಶ್ ಜಾಧವ ಅವರಿಗೆ ಗಾಯ

ಕಾರು ಅಪಘಾತ: ಸಂಸದ ಉಮೇಶ್ ಜಾಧವ ಅವರಿಗೆ ಗಾಯ

 


ಕಲಬುರಗಿ: ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿದ್ದ ಕಾರು ಎದುರಿನ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಚಿವರೊಂದಿಗೆ ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂಸದ ಡಾ. ಉಮೇಶ ಜಾಧವ ಅವರು ಆಯತಪ್ಪಿ ಮಧ್ಯದ ಸೀಟಿನಿಂದ ಮುಂದಿನ ಸೀಟಿಗೆ ಹೋಗಿದ್ದರಿಂದ ಅವರ ಕೈ ಹಾಗೂ ಕಾಲಿಗೆ ಗಾಯವಾಗಿದೆ.

ಕೂಡಲೇ ಆಸ್ಪತ್ರೆಗೆ ತೆರಳಿದ ಸಂಸದರಿಗೆ ವೈದ್ಯರು ಚಿಕಿತ್ಸೆ ನೀಡಿದರು. ಸ್ಕ್ಯಾನಿಂಗ್‌ ಮಾಡಿಸಿದಾಗ ಕೈಗೆ ಫ್ರ್ಯಾಕ್ಚರ್ ಆಗಿರುವುದು ಕಂಡು ಬಂದಿದೆ.

ಸಚಿವ ಬಿ.ಸಿ. ಪಾಟೀಲ ಅವರೊಂದಿಗೆ ಕೃಷಿ ಮಹಾವಿದ್ಯಾಲಯದಲ್ಲಿ ನಡೆದ ವಿಸ್ತರಣಾ ಘಟಕದ ಕಟ್ಟಡದ ಶಂಕು ಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಅವರೊಂದಿಗೆ ಕಾರಿನಲ್ಲಿ ವಿಮಾನ ನಿಲ್ದಾಣದತ್ತ ಹೊರಟಿದ್ದರು.

ಸಚಿವರು ತಂದಿದ್ದ ಹೆಲಿಕಾಪ್ಟರ್ ಆದಷ್ಟು ಬೇಗ ಟೇಕಾಫ್‌ ಆಗಬೇಕಿದ್ದುದರಿಂದ ಕಾರು ವೇಗವಾಗಿ ಹೊರಟಿತ್ತು. ರೋಡ್‌ ಬ್ರೇಕ್‌ ಬಂದಿದ್ದರಿಂದ ಬೆಂಗಾವಲು ಪಡೆಯ ವಾಹನ ನಿಧಾನಗೊಂಡಿತು.

ಸಚಿವರಿದ್ದ ಕಾರು ನಿಯಂತ್ರಣ ತಪ್ಪಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆಯಿತು. ಮಧ್ಯದ ಸೀಟಿನಲ್ಲಿ ಕುಳಿತಿದ್ದ ಸಂಸದರು ಚಾಲಕನ ಬಳಿ ಚಲಿಸಿದರು. ಹೀಗಾಗಿ ಕೈಗೆ ಗಾಯವಾಯಿತು.


0 تعليقات

إرسال تعليق

Post a Comment (0)

أحدث أقدم