ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುಂಜಾಲಕಟ್ಟೆ: 'ಹದಿಹರಯ ಮತ್ತು ಆರೋಗ್ಯ' ವಿಶೇಷ ಉಪನ್ಯಾಸ

ಪುಂಜಾಲಕಟ್ಟೆ: 'ಹದಿಹರಯ ಮತ್ತು ಆರೋಗ್ಯ' ವಿಶೇಷ ಉಪನ್ಯಾಸ



ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಬೆಳ್ತಂಗಡಿ ತಾಲೂಕು ಇಲ್ಲಿ ಭಾರತೀಯ ಯುವ ರೆಡ್ ಕ್ರಾಸ್ ಇದರ ವತಿಯಿಂದ IQAC ಸಹಯೋಗದೊಂದಿಗೆ ರಾಷ್ಟ್ರೀಯ ಯುವ ಸಪ್ತಾಹದ‌ ಪ್ರಯುಕ್ತ 'ಹದಿಹರೆಯ & ಆರೋಗ್ಯ' ಎಂಬ ವಿಷಯದ ಕುರಿತು ವಿಶೇಷ ಉಪಾನ್ಯಾಸ ಕಾರ್ಯಕ್ರಮ ಶುಕ್ರವಾರ (ಜ.14) ಆಯೋಜಿಸಲಾಯಿತು.


ವಿದ್ಯಾರ್ಥಿಗಳ ಬದುಕು ಹೇಗೆ ಇರಬೇಕು. ಹದಿಹರೆಯ ವಯಸ್ಸಿನಲ್ಲಿ ಯಾವರೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಹೆಣ್ಣು ಮತ್ತು ಗಂಡು ಮಕ್ಕಳಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ. ಸನ್ನಿವೇಶಗಳಿಗೆ ಯಾವರೀತಿ ಯವ ಸಮುದಾಯ ಸ್ಪಂದಿಸಬೇಕು ಎಂಬುದನ್ನು ಬಹಳ ಅರ್ಥಪೂರ್ಣವಾಗಿ ವಿದ್ಯಾರ್ಥಿಗಳಿಗೆ ಮನ ಮುಟ್ಟುವ ಹಾಗೆ ಶ್ರೀಮತಿ ರಮ್ಯಾ, ಸಲಹೆಗಾರರು ರಾಷ್ಟ್ರೀಯ ಕಿಶೋರ ಸ್ವಾಸ್ತ್ಯ ಕಾರ್ಯಕ್ರಮ ಇವರು (RKSK) ಮಾಹಿತಿಯನ್ನು ನೀಡಿದರು.                                


ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಪ್ರೊ. ಗೀತಾರವರು ಪ್ರಸ್ತಾವಿಕ‌ ನುಡಿಗಳನ್ನಾಡಿದರು. ಪ್ರಾಂಶುಪಾಲರಾದ ರವಿಶಂಕರ್ ಬಿ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀಯುತರು ವಿಶ್ವಾಸವೇ ಅತಿ ದೊಡ್ಡ ಶಕ್ತಿಎಂದು ಹೇಳಿದರು.


ರೆಡ್ ಕ್ರಾಸಿನ ಸಂಚಾಲಕರಾದ ಪ್ರೊ. ಶೇಖರ್, ಪ್ರೊ.ರಾಜೇಶ್ಚರಿ, ಪ್ರೊ.ಆಂಜನೇಯ, ಪ್ರೊ. ಪ್ರೀತಿ ಕೆ ರಾವ್, IQAC ಸಂಚಾಲಕರಾದ ಡಾ.ಲೊಕೇಶ್ ಹಾಗೂ ಇತರ ಉಪನ್ಯಾಸಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶುಭ ಸ್ವಾಗತಿಸಿದರು. ಸಪ್ನಾ ವಂದಿಸಿದರು. ಅಶುರ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post