ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೇವಿಕಾ ಯೋಗ ತರಬೇತಿ ಸಂಸ್ಥೆಯಿಂದ ಯೋಗ ಶಿಬಿರ

ದೇವಿಕಾ ಯೋಗ ತರಬೇತಿ ಸಂಸ್ಥೆಯಿಂದ ಯೋಗ ಶಿಬಿರ



ಮಂಗಳೂರು: ದೇವಿಕಾ ಯೋಗ ಸಂಸ್ಥೆ ಮಂಗಳೂರು ಆಯೋಜಿಸಲಾಗಿದ್ದ ಯೋಗ ಶಿಬಿರ ಗುರುವಾರ (ಜನವರಿ 13ಕ್ಕೆ) ಸಂಪನ್ನಗೊಂಡಿತು. ಸಕ್ಷಮ ದ.ಕ ಮತ್ತು ಪುತ್ತೂರು ಘಟಕದ ಸಹಭಾಗಿತ್ವದಲ್ಲಿ ಸಮಾರೋಪ ಕಾರ್ಯಕ್ರಮಗಳು ನಡೆದವು.


ಮಂಗಳೂರಿನ ಪ್ರಸಿದ್ದ ಯೋಗ ಥೆರಪಿಸ್ಟ್ ಮತ್ತು ಯೋಗ ಟ್ರೈನರ್ ಆಗಿರುವ ಶ್ರೀಮತಿ ದೇವಿಕಾ ಪುರುಷೋತ್ತಮ್ ಅವರು ಈ ಶಿಬಿರವನ್ನು ನಡೆಸಿಕೊಟ್ಟರು. ಸಾಮಾನ್ಯ ಜನರಿಂದ  ಜಿಲ್ಲಾ ಕಲೆಕ್ಟರ್, ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಹ ಇವರ ಶಿಷ್ಯ ವೃಂದದಲ್ಲಿ ಇದ್ದಾರೆ. ದೇವಿಕಾ ಪುರುಷೋತ್ತಮ್ ಅವರು ಯೋಗ ಶಿಕ್ಷಣ ಅಭಿಯಾನದಿಂದ ಬರುವಂತಹ ಗುರು ಕಾಣಿಕೆಯ ಬಹುತೇಕ ಭಾಗವನ್ನು ಬೇರೆ ಬೇರೆ ಸಮಾಜ ಮುಖಿ ಕಾರ್ಯಗಳಿಗೆ ಬಳಸುವುದು ತುಂಬಾ ವರ್ಷದಿಂದ ರೂಡಿಸಿಕೊಂಡಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಮಂಗಳೂರಿನ ಸುಬ್ರಮಣ್ಯ ಸಭಾದಲ್ಲಿ ಯೋಗ ಶಿಕ್ಷಣ ತರಬೇತಿ ಹಮ್ಮಿಕೊಂಡಿದ್ದರು. ಅದರ ಸಮಾರೋಪ ಸಮಾರಂಭವನ್ನು 13 ಜನವರಿ 2022 ರಂದು ಆಯೋಜಿಸಲಾಯಿತು. ಈ ಬಾರಿಯ ಗುರುಕಾಣಿಕೆಯ ಕೊಡುಗೆಯನ್ನು ಪುತ್ತೂರಿನ ಅಣ್ಣಪ್ಪ ದಂಪತಿಗಳು ವಿಕಲ ಚೇತನರಿಗೆ ನಡೆಸುವಂತ ಪ್ರಜ್ಞಾ ಆಶ್ರಮಕ್ಕೆ ಬೇಕಾದ ಎರಡು ಸೋಲಾರ್ ಸ್ಟ್ರೀಟ್ ಲೈಟ್, ಕಬ್ಬಿಣದ ಕಪಾಟು, ಗೃಹೋಪಯೋಗಿ ಸಾಮಾನುಗಳು ಮತ್ತು ಆಶ್ರಮದ ಮಕ್ಕಳಲ್ಲಿ ಮಾನಸಿಕ ಬೆಳವಣಿಗೆಗೆ ಬೇಕಾದಂತಹ ವಿವಿಧ ಆಟಿಕೆಗಳನ್ನು ಕೊಡುಗೆಯಾಗಿ ಕೊಟ್ಟು ಸಾಮಾಜಿಕ ಹಿರಿತನವನ್ನು ಮೆರೆದರು.


ಈ ಕೆಲಸದಲ್ಲಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಹರೀಶ್ ಪ್ರಭು ಮತ್ತು ರಾಜಶೇಖರ ಭಟ್ ಕಾಕುಂಜೆಯವರು ಹಾಗೂ ಸಕ್ಷಮ ಪುತ್ತೂರು ತಾಲೂಕು ಘಟಕದ ಉಮೇಶ್ ನಾಯಕ್ ತುಂಬಾ ಮುತುವರ್ಜಿ ವಹಿಸಿ ಸಂಯೋಜಿಸಿದರು. ಅದೇ ದಿನ ಸಾಯಂಕಾಲ ಸುಬ್ರಮಣ್ಯ ಸಭಾದಲ್ಲಿ ಹಮ್ಮಿಕೊಂಡ ಸರಳ ಸಮಾರೋಪ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದ ಸಕ್ಷಮದ ಕಾರ್ಯಕರ್ತರಾದ ರಾಜಶೇಖರ ಭಟ್ ಕಾಕುಂಜೆಯವರು, ಸಕ್ಷಮ ದಿವ್ಯಾಂಗರ ಅಭಿವೃದ್ಧಿಗಾಗಿ ನಡೆಸುತ್ತಿರುವ ಕಾರ್ಯಚಟುವಟಿಕೆ ಬಗ್ಗೆ ವಿವರಣೆ ನೀಡಿ, ಕಣ್ಣು ದಾನ (ನೇತ್ರದಾನ) Eye Donation ಮಾಡುವುದರ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯದಲ್ಲಿ ಮಾತೃಶಕ್ತಿ ಮುಂದೆ ಬರಬೇಕೆಂದು ಕರೆ ನೀಡಿದರು.


ಇದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಮಾರಿ ಚಂದ್ರಿಕಾ ರಾವ್ ಅವರು ಶಕ್ತಿನಗರ we care animal foundation ಬಗ್ಗೆ ಮಾಹಿತಿ ನೀಡಿದರು. ಸುಬ್ರಮಣ್ಯ ಸಬಾದ ಶ್ರೀಕಾಂತ ರಾವ್ ಮಾತನಾಡಿ, ಸುಬ್ರಹ್ಮಣ್ಯ ಸಭಾ ಯಾವತ್ತೂ ಸಮಾಜ ಮುಖಿ ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತಾ ಬಂದಿದೆ ಎಂದರು.


ಸಕ್ಷಮ ದ.ಕ ಜಿಲ್ಲಾ ಘಟಕದ ಕಾರ್ಯದರ್ಶಿ ಹರೀಶ್ ಪ್ರಭು ಮತ್ತು ಸ್ವಚ್ಛ ಮಂಗಳೂರು ತಂಡದ ಸಂಯೋಜಕರಾದ ಉಮಾನಾಥ್ ಕೋಟೆಕಾರ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಚಂದ್ರಿಕಾ ಅವರು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post