ಪುತ್ತೂರು: ಭಾರತ ಸರ್ಕಾರ ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವ ಜನ ಒಕ್ಕೂಟ (ರಿ) ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಶ್ರೀ ವಿಷ್ಣು ಯುವ ಶಕ್ತಿ ಬಳಗ (ರಿ) ಮಜ್ಜಾರಡ್ಕ ಇದರ ವತಿಯಿಂದ ತಾಲೂಕು ಮಟ್ಟದ ಕ್ರೀಡಾಕೂಟವು ಜನವರಿ 14 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.
ಸಮಾರೋಪ ಸಮಾರಂಭ: ತಾಲೂಕು ಮಟ್ಟದ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮ ಸಂಜೆ 4 ಗಂಟೆಗೆ ನಡೆಯಿತು.
ಈ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ ಇದರ ಅಧ್ಯಕ್ಷರಾದ ಉದಯ್ ಸ್ವಾಮಿನಗರ ವಹಿಸಿದ್ದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಂಘಟನಾ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕು ಯುವ ಜನ ಒಕ್ಕೂಟ ಅಧ್ಯಕ್ಷರಾದ ದಿನೇಶ್ ಸಾಲ್ಯಾನ್, ಪದ್ಮಶ್ರೀ ಸೋಲಾರ್ ಸಿಸ್ಟಮ್ ಪುತ್ತೂರಿನ ಸೀತಾರಾಮ್ ರೈ ಕೆದಂಬಾಡಿ ಗುತ್ತು, ಮಾತೃ ಶ್ರೀ ಅರ್ಥ್ ಮೂವರ್ಸ್ ಕುಂಬ್ರದ ಶ್ರೀ ಮೋಹನ್ ದಾಸ್ ರೈ , ತಾಲೂಕು ಯುವ ಜನ ಒಕ್ಕೂಟದ ಕೋಶಾಧಿಕಾರಿ ಹಮೀದ್ ಸಾಜ ಕಾರ್ಯಕ್ರಮಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ನೆಹರು ಯುವ ಕೇಂದ್ರದ ಮಂಗಳೂರು ತಾಲೂಕು ಸಂಯೋಜಕ ನಾಗರಾಜ್ ಮಂಗಳೂರು ,ಪುತ್ತೂರು ತಾಲೂಕು ಸಂಯೋಜಕರಾದ ಗೌತಮ್ ರಾಜ್ ಕರಂಬಾರು, ಪ್ರಜ್ಞಾ ಕುಲಾಲ್ ಕಾವು, ಹಾಗೂ ಶ್ರೀ ವಿಷ್ಣು ಯುವ ಶಕ್ತಿ ಬಳಗದ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ ಮಯೂರ ಉಪಸ್ಥಿತರಿದ್ದರು.
ತಾಲೂಕು ಮಟ್ಟದ ಕ್ರೀಡಾಕೂಟದ ವಿಜೇತರ ವಿವರ:
ತಾಲೂಕಿನ ಯುವಕ ಯುವತಿಯರಿಗೆ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, 20 ಕ್ಕೂ ಹೆಚ್ವು ಯುವಕ ಯುವತಿಯರ ತಂಡಗಳು ಭಾಗವಹಿಸಿದೆ.
ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾಟ
ಪ್ರಥಮ: ಕೆಸಿಸಿ ಪಾಪೆಮಜಲು 'ಬಿ' ತಂಡ
ದ್ವೀತಿಯ: ಕೆಸಿಸಿ ಪಾಪೆಮಜಲು 'ಎ' ತಂಡ
ಪುರುಷರ ವಿಭಾಗದ ಹಗ್ಗಜಗ್ಗಾಟ
ಪ್ರಥಮ: ಕ್ರೀಸ್ಟೋಫರ್ ಫಿಟ್ನೆಸ್ ಜಿಮ್ 'ಎ' ತಂಡ
ದ್ವೀತಿಯ: ಕ್ರೀಸ್ಟೋಫರ್ ಫಿಟ್ನೆಸ್ ಜಿಮ್ 'ಬಿ' ತಂಡ
ಮಹಿಳೆಯರ ವಿಭಾಗದ ತ್ರೋಬಾಲ್ ಪಂದ್ಯಾಟ
ಪ್ರಥಮ: ಕೆಸಿಸಿ ಪಾಪೆಮಜಲು
ದ್ವಿತೀಯ: ಶ್ರೀ ಗೌರಿ ಯುವತಿ ಮಂಡಲ ಸರ್ವೆ
ಮಹಿಳೆಯರ ಹಗ್ಗಜಗ್ಗಾಟ
ಪ್ರಥಮ: ಬ್ರಹ್ಮ ಶ್ರೀ ಕುಂಬ್ರ
ದ್ವಿತೀಯ: GFGC ಪುತ್ತೂರು
ಪುರುಷರ ಉದ್ದಜಿಗಿತ
ಪ್ರಥಮ: ಮಧುಸೂದನ್
ದ್ವಿತೀಯ: ನವೀನ್
ತೃತೀಯ: ಸಾತ್ವಿಕ್
ಪುರುಷರ ವಿಭಾಗದ 400 ಮೀ ಓಟ ಸ್ಪರ್ಧೆ
ಪ್ರಥಮ: ಸುಶಾನ್ ಪ್ರಕಾಶ್ ಕೆ ಆರ್
ದ್ವೀತಿಯ: ಮಧುಸೂದನ್
ತೃತೀಯ: ಸಾತ್ವಿಕ್
ಪುರುಷರ ವಿಭಾಗದ ಗುಂಡೆಸತ
ಪ್ರಥಮ: ಆದರ್ಶ್
ದ್ವಿತೀಯ: ಧನುಷ್
ತೃತೀಯ: ಅನೂಪ್
ಮಹಿಳೆಯರ ವಿಭಾಗದ ಉದ್ದಜಿಗಿತ
ಪ್ರಥಮ: ಮೀನಾಕ್ಷಿ
ದ್ವಿತೀಯ: ಅಶ್ವಿನಿ
ತೃತೀಯ: ಚಿತ್ರ
ಮಹಿಳೆಯರ ವಿಭಾಗದ 400 ಮೀ ಓಟ ಸ್ಪರ್ಧೆ
ಪ್ರಥಮ: ಚಿತ್ರ
ದ್ವಿತೀಯ: ಭವ್ಯ
ತೃತೀಯ: ಮೀನಾಕ್ಷಿ
ಮಹಿಳೆಯರ ಗುಂಡೆಸತ
ಪ್ರಥಮ: ರಮ್ಯ
ದ್ವಿತೀಯ: ಜಯಲಕ್ಷ್ಮಿ
ತೃತೀಯ: ಶರ್ಮಿಳಾ
ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು. ಹಾಗೂ ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಪ್ರಯೋಜಕರಾಗಿ ಸಹಕರಿಸಿದ ಪ್ರಸಾದ್ ಬಿರ್ವ ಕಾವು, ಅನಿಲ್ ಕುಮಾರ್ ಕಣ್ಣಾರ್ ನೂಜಿ, ಯತೀಶ್ ನಾಯ್ಕ್ ಕಟ್ಟಾರ- ಬೆಳ್ಳಿಪ್ಪಾಡಿ, ರಾಧಾಕೃಷ್ಣ ಗೌಡ ಪೆರ್ನೆ, ಶ್ರೀಮತಿ ಮತ್ತು ರಘನಾಥ್ ಗೋಳ್ತಿಲ ಇವರಿಗೂ ಹಾಗೂ ತೀರ್ಪುಗಾರರಾಗಿ ಸಹಕರಿಸಿದ ಚಂದ್ರಕಲಾ, ಪ್ರದೀಪ್, ತಿರುಮಲೇಶ್ವರ, ನಂದಕುಮಾರ್ ಪಾಪೆಮಜಲು, ಸಂಯೋಜಕರಾದ ಪ್ರಜ್ಞಾ ಕುಲಾಲ್ ಕಾವು ಮತ್ತು ಗೌತಮ್ ರಾಜ್ ಕರಂಬಾರು, ಸಂದೀಪ್ ಕುಮಾರ್, ಹಮೀದ್ ಸಾಜ ಇವರಿಗೆ ಸಂಘಟನೆವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕ್ರೀಡಾಕೂಟ ಕಾರ್ಯಕ್ರಮದಲ್ಲಿ ತಾಲೂಕಿನ ಯುವಕ ಯುವತಿಯರ ತಂಡ, ಸಂಘಟನೆಯ ಪಧಾದೀಕಾರಿಗಳು, ಸರ್ವಸದಸ್ಯರು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ತಾಲೂಕು ಯುವ ಜನ ಒಕ್ಕೂಟ ವತಿಯಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಯಿತು.
ಸಂತಫಿಲೋಮಿನಾ ಕಾಲೇಜಿನ ತೃತೀಯ ಬಿ ಎಸ್ಸಿ ವಿದ್ಯಾರ್ಥಿನಿ ಚೈತ್ರ ಮಾಯಿಲಕೊಚ್ಚಿ ಕಾರ್ಯಕ್ರಮ ನಿರೂಪಿಸಿದರು, ಭವಿತ್ ಮಜ್ಜಾರ್ ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment